ಹರ್ಯಾಣ: ಕೃಷಿ ಕಾನೂನು ಬೆಂಬಲಿಸುವ ಕಾರ್ಯಕ್ರಮಗಳಿಗೆ ಅಮಿತ್ ಶಾ ರಿಂದ ನಿಷೇಧ

0
473

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶಾದ್ಯಂತ ಅಲೆಯೆಬ್ಬಿಸಿರುವ ಕೃಷಿ ಕಾನೂನು ವಿರೋಧಿ ಹೋರಾಟದ ಬಿಸಿಯಲ್ಲಿ ನೊಂದ ಬಿಜೆಪಿ ಹರ್ಯಾಣದಲ್ಲಿ ಕೃಷಿ ಕಾನೂನು ಬೆಂಬಲಿಸುವ ಯಾವ ಕಾರ್ಯಕ್ರಮವನ್ನೂ ಆಯೋಜಿಸಬಾರದೆಂದು ಆದೇಶವನ್ನು ಗೃಹ ಸಚಿವ ಅಮಿತ್ ಶಾ ಹೊರಡಿಸಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಮನೋಹರಲಾಲ್‍ರ ಸ್ವಕ್ಷೇತ್ರ ಕರ್ನಾಲ್‍ನಲ್ಲಿ ಆಯೋಜಿಸಿದ್ದ ಕೃಷಿ ಕಾನೂನು ಪರ ಕಾರ್ಯಕ್ರಮವನ್ನು ರೈತರ ಪ್ರತಿಭಟನೆಯಿಂದಾಗಿ ಸ್ಥಗಿತಗೊಳಿಸಬೇಕಾಗಿ ಬಂದಿತ್ತು.

ಇನ್ನೂ ಇಂತಹ ಕಾರ್ಯಕ್ರಮ ಮಾಡುವುದರಿಂದ ಹರಿಯಾಣದಲ್ಲಿ ಬಿಜೆಪಿ ದುರ್ಬಲಗೊಳ್ಳುವುದಕ್ಕೆ ಕಾರಣವಾದೀತೆಂಬ ಶಂಕೆ ವ್ಯಕ್ತವಾಗಿದ್ದು ರೈತರೊಂದಿಗೆ ಇನ್ನು ಘರ್ಷಣೆಯ ಉದ್ದೇಶವಿಲ್ಲ ಎಂದು ಕಟ್ಟರ್ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಕನ್ವರ್ ಪಾಲ್ ಗುಜ್ಜಾರ್ ಹೇಳಿದ್ದಾರೆ. ಮಂಗಳವಾರ ಅಮಿತ್‍ ಶಾ ರಾಜ್ಯ ಪರಿಸ್ಥಿತಿಯ ಕುರಿತು ಚರ್ಚಿಸಿದ್ದರು.

ಜನವರಿ 26ರಂದು ದಿಲ್ಲಿಯಲ್ಲಿ ಬೃಹತ್ ಟ್ರಾಕ್ಟರ್ ರ್ಯಾಲಿಗೆ ರೈತರು ಸಜ್ಜಾಗಿದ್ದಾರೆ. ಜನವರಿ 10ಕ್ಕೆ ಕರ್ನಾಲ್‍ನ ಕೈಲಂ ಗ್ರಾಮದಲ್ಲಿ ಕಿಸಾನ್ ಮಹಾ ಪಂಚಾಯತ್ ಆಯೋಜಿಸಿ ರೈತರನ್ನು ಉದ್ದೇಶಿ ಮಾತಾಡುವ ಕಟ್ಟರ್ ಕಾರ್ಯಕ್ರಮ ಇತ್ತು. ಆದರೆ ರೈತರು ವೇದಿಕೆಯನ್ನು ನಾಶಪಡಿಸಿ, ಕುರ್ಚಿ ಪೋಸ್ಟರ್‌ಗಳನ್ನು ನಾಶಮಾಡಿ ವಿರೋಧಿಸಿದ್ದರು. ಪೊಲೀಸರು ಅಶ್ರುವಾಯು, ವಾಟರ್ ಕ್ಯಾನನ್ ಪ್ರಯೋಗಿಸಿದ್ದರು.