ಯೋಗಿ ಸರಕಾರದ ವಿರುದ್ಧ ನಿಲುವು: ಹಿಂದುತ್ವ ವಾದಿಗಳಿಂದ ಹುತಾತ್ಮ ಸೈನಿಕನ ಅಪ್ರಾಪ್ತ ಪುತ್ರಿಯ ವಿರುದ್ಧ ಟ್ರೋಲ್

0
239

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ತಮಿಳ್ನಾಡಿನ ಕುನೂರಿನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದ ಬ್ರಿಗೇಡಿಯರ್ ಲಕೀಂದರ್ ಸಿಂಗ್ ಲಡ್ಡರ್‌ರವರ ಹದಿನೇಳು ವರ್ಷದ ಪುತ್ರಿ ಅಷ್ನಾ ಲಡ್ಡರ್ ವಿರುದ್ಧ ಸಂಘಪರಿವಾರದ ತೀವ್ರ ಹಿಂದುತ್ವವಾದಿಗಳು ಆಕ್ಷೇಪಗಳ ಸುರಿಮಳೆಗೆರೆಯುತ್ತಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನಿಲುವು ವ್ಯಕ್ತಪಡಿಸಿದ್ದಕ್ಕೆ ಆಕ್ಷೇಪಿಸಲಾಗುತ್ತಿದೆ ಎಂಬುದಾಗಿ ವರದಿಯಾಗಿದೆ‌‌.

ಅಷ್ನಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದು, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಈ ಹಿಂದೆ, ಪ್ರಿಯಾಂಕ ಗಾಂಧಿಯವರು ಬಂಧನದಲ್ಲಿದ್ದಾಗ ಕೊಠಡಿಯ ಕಸ ಗುಡಿಸಿದ ಕುರಿತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರು ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ‌‌ಮಾಡಿದ್ದರು. ಇದನ್ನೇ ಗುರಿಯಾಗಿಸಿ ತೀವ್ರವಾದಿಗಳು ಅಷ್ನಾ‌ರನ್ನು ಟ್ರೋಲ್ ಮಾಡುತ್ತಿದ್ದಾರೆ.

ಅಷ್ನಾ ಲಡ್ಡರ್ ತೀವ್ರ ಎಡಪಂಥೀಯವಾದಿ ಎಂದು ಕಮೆಂಟುಗಳನ್ನು ಕೂಡ ಒಂದು ವಿಭಾಗ ಟ್ವಿಟರ್‌ನಲ್ಲಿ ಹಾಕಿದ್ದವು. ಆಕ್ಷೇಪ ಅಸಹನೀಯವಾದ್ದರಿಂದ ಆಷ್ನಾ ಟ್ವಿಟರ್ ಅಕೌಂಟಿನಿಂದ ಡಿ ಆಕ್ಟಿವೇಟ್ ಆಗಿದ್ದಾರೆ. ಅಷ್ನಾ ಹಲವು ವಿಷಯಗಳಲ್ಲಿ ಪೊಸ್ಟ್ ಮತ್ತು ವೀಡಿಯೊ ಮೂಲಕ ತಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದರು. ಕಳೆದ ನವೆಂಬರ್ 27ಕ್ಕೆ ಅಷ್ನಾರ ಪುಸ್ತಕ ಬಿಡುಗಡೆಯನ್ನು ಮಾಜಿ ರಾಜ್ಯಪಾಲೆ, ಐಪಿಎಸ್ ಅಧಿಕರಿ ಕಿರಣ್ ಬೇಡಿ ಮಾಡಿದ್ದರು. ಅಷ್ನಾರ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಧುಲಿಕ ರಾವತ್ ಮುಖ್ಯ ಅತಿಥಿಯಾಗಿದ್ದರು. ಆಷ್ನಾರ ತಂದೆ ಬ್ರಿಗೇಡಿಯರ್ ಎಲ್.ಎಸ್.ಲಡ್ಡರ್, ಅವರ ತಾಯಿ ಕೂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದು ಈ ಕಾರ್ಯಕ್ರಮದ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದರು.

ಅಷ್ನಾರ ವಿರುದ್ಧ ನಡೆಯುತ್ತಿರುವ ಆಕ್ಷೇಪಗಳನ್ನು ವಿರೋಧಿಸಿ ಶಿವಸೇನೆ ನಾಯಕಿ ಪ್ರಿಯಾಂಕ ಚುತುರ್ವೇದಿ ಮತ್ತು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಮುಂತಾದ ಪ್ರಮುಖರು ಟ್ವೀಟ್ ಮಾಡಿದ್ದಾರೆ.