ಅಲೋಡೊಕ್ಸಾಫೋಬಿಯಾ: ಬಿಜೆಪಿಯನ್ನು ಟೀಕಿಸಲು ಹೊಸ ಪದ ಪರಿಚಯಿಸಿದ ಸಂಸದ ಶಶಿ ತರೂರ್

0
356

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಶಶಿ ತರೂರ್ ಹೊಸತಾದ ಹಾಗೂ ಕ್ಲಿಷ್ಟಕರ ಉಚ್ಛಾರಗಳುಳ್ಳ ಇಂಗ್ಲೀಷ್ ಪದಗಳ ಬಳಕೆಗೆ ಪ್ರಖ್ಯಾತರು. ಅವರು ರಸಕರ ಪದಗಳಲ್ಲಿ ಟೀಕೆಗಳನ್ನು ಮಾಡುತ್ತಾರೆ. ಆದರೆ, ಬಿಜೆಪಿಯನ್ನು ಟೀಕಿಸಲು ಒಂದು ಹೊಸ ಪದದೊಂದಿಗೆ ಮುಂದೆ ಬಂದಿದ್ದು, ಅಲೋಡೊಕ್ಸಾಫೋಬಿಯಾ(Allodoxaphobia) ಎಂಬುದು ಈ ಪದವಾಗಿದೆ. ಈ ಪದದ ಅರ್ಥ ಭಿನ್ನ ಅಭಿಪ್ರಾಯ ಇವರವರಲ್ಲಿ ಹೆದರಿಕೆ ಎಂದಾಗಿದೆ. ಇದನ್ನು ತರೂರ್ ಸ್ವತಃ ಟ್ವಟರ್‌ನಲ್ಲಿ ವಿಶ್ಲೇಷಿಸಿದ್ದಾರೆ.

ಅಲೋಡಾಕ್ಸಾಫೋಬಿಯಾ ಇಂದಿನ ಪದ ಮಾತ್ರವಲ್ಲ, ಕಳೆದ ಏಳು ವರ್ಷಗಳಷ್ಟು ಹಳೆಯದು. ಭಿನ್ನಾಭಿಪ್ರಾಯ ಇರುವವರಲ್ಲಿ ಹೆದರಿಕೆ ಹುಟ್ಟುವುದಾಗಿದೆ. ಉತ್ತರಪ್ರದೇಶ ಬಿಜೆಪಿ ಸರಕಾರ ಜನರ ಮೇಲೆ ದೇಶದ್ರೋಹ ಮತ್ತು ಯುಎಪಿಎ ಹೊರಿಸಲು ಅಲೋಡಾಕ್ಸಾಫೋಬಿಯಾದಿಂದ ನರಳುತ್ತಿರುವುದೇ ಕಾರಣ. (ಗ್ರೀಕ್ ಭಾಷೆಯಲ್ಲಿ ಅರ್ಥ: ಅಲೋ=ಬೇರೆ ಬೇರೆ, ಡೊಕ್ಸಾ-ಅಭಿಪ್ರಾಯ, ಫೋಬಿಯಾ=ಭಯ) ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಜನರ ವಿರುದ್ಧ ಬಿಜೆಪಿ ಸರಕಾರ ಯುಎಪಿಎ, ದೇಶದ್ರೋಹ ಆರೋಪ ಹೊರಿಸುತ್ತಿದೆ. ಇದು ಬೇರೆ ಬೇರೆ ಅಭಿಪ್ರಾಯ ಇರುವವರೊಂದಿಗಿನ ಹೆದರಿಕೆಯ ಕಾರಣದಿಂದಾಗಿದೆ ಎಂದು ತರೂರ್ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. ಹೊಸ ಪದದ ಬಗ್ಗೆ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆ ಕೇಳಿ ಬರುತ್ತಿದೆ.