ಆಗ್ರದಲ್ಲಿ ಬಸ್ ನದಿಗೆ : 29 ಸಾವು

0
471

ಲಕ್ನೊ, ಜು. 8: ಉತ್ತರಪ್ರದೇಶದ ಲಕ್ನೊದಲ್ಲಿ ಬಸ್ ನದಿಗೆ ಬಿದ್ದು 29 ಮಂದಿ ಮೃತಪಟ್ಟಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಆರುಗಂಟೆ ಸಮಯಕ್ಕೆ ಆಗ್ರದ ಸಮೀಪದ ಯಮುನಾ ನದಿಗೆ ಅತಿವೇಗದಿಂದ ಬಂದ ಬಸ್ ಉರುಳಿ ಬಿದ್ದಿದೆ. ಬಸ್‍ನಲ್ಲಿ 44 ಮಂದಿ ಪ್ರಯಾಣಿಸುತ್ತಿದ್ದರು. ಲಕ್ನೊದಿಂದ ದಿಲ್ಲಿಯ ಆನಂದ್ ವಿಹಾರಕ್ಕೆ ಹೋಗುವ ಬಸ್ ನದಿಗೆ ಉರುಳಿ ಬಿದ್ದಿದ್ದು ಉತ್ತರ ಪ್ರದೇಶದ ರಸ್ತೆಸಾರಿಗೆಯ ಬಸ್ ಇದು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಗ್ರ ಜಿಲ್ಲಾಧಿಕಾರಿ ಎನ್‍ಜಿ ರವಿಕುಮಾರ್ ಹೇಳಿದರು. ನೊಯಿಯ ಮತ್ತು ಆಗ್ರವನ್ನು ಜೋಡಿಸುವ 165 ಕಿಲೊಮೀಟರ್ ಉದ್ದವಿರುವ ಷಟ್ಪಥ ಮಾರ್ಗದಲ್ಲಿ ದುರಂತ ಸಂಭವಿಸಿದೆ.