ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲ ಹ್ಯಾರಿಸ್: ತಮಿಳುನಾಡಿನ ತುಳಸೇಂದ್ರಪುರಂ‌ನಲ್ಲಿ ಹಬ್ಬ

0
374

ಸನ್ಮಾರ್ಗ ವಾರ್ತೆ

ಚೆನ್ನೈ: ಅಮೆರಿಕದ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪ್ರಮಾಣವಚನ ಸ್ವೀಕರಿಸುವುದರಿಂದ ತಮಿಳುನಾಡಿನ ತಳಸೇಂದ್ರಪುರಂನಲ್ಲಿ ಹಬ್ಬದ ವಾತಾವರಣವಿದೆ. ಅಮೆರಿಕದ ಇತಿಹಾಸದಲ್ಲಿ ಪ್ರಥಮ ಮಹಿಳಾ ಉಪಾಧ್ಯಕ್ಷೆಯಾಗಿ ಕಮಲ ಹ್ಯಾರಿಸ್ ಆಯ್ಕೆಯಾಗಿದ್ದು, ಅವರ ಪೂರ್ವಜರ ಗ್ರಾಮ ತಮಿಳ್ನಾಡಿನ ತುಳಸೇಂದ್ರಪುರಂ ಆಗಿದೆ.

ಇಲ್ಲಿನ ಹಲವು ಸ್ವಯಂ ಸೇವಾ ಸಂಘಟನೆಗಳು ಮತ್ತು ಮಂದಿರ ಕಮಿಟಿ ಹಬ್ಬಾಚಾರಣೆ ಕಾರ್ಯಕ್ರಮಗಳಿಗೆ ನೇತೃತ್ವ ನೀಡುತ್ತಿದೆ. ತಿರುವಾರೂರ್ ಜಿಲ್ಲೆಯ ತುಳಸೇಂದ್ರಪುರಂ ಶ್ರೀಧರ್ಮ ಶಾಸ್ತ ಅಯ್ಯನಾರ್ ಕೋವಿಲ್‍ನಲ್ಲಿ ವಿಶೇಷ ಪೂಜೆ ನಡೆಯಿತು. ಪಟಾಕಿ ಸಡಿಸಿ ಸಿಹಿ ವಿತರಣೆಯೊಂದಿಗೆ ಜನರು ಸಂಭ್ರಮಿಸಿದರು. ತಿರುವಾರೂರಿಗೆ ಗೊತ್ತಿಲ್ಲದಂತಿರುವ ಪುಟ್ಟಗ್ರಾಮ ತುಳಸೇಂದ್ರಪುರಂ ಕಮಲ ಹ್ಯಾರಿಸ್‍ರಿಂದ ಪ್ರಸಿದ್ಧಿಗೆ ಬಂದಿದೆ. ಮನೆಗಳಲ್ಲಿ ಅಮೆರಿಕ ಮತ್ತು ಭಾರತದ ಧ್ವಜವನ್ನು ಹಾರಿಸಲಾಗಿತ್ತು. ತುಳಸೇಂದ್ರಪುರಂ ವಿಶೇಷಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು.

ಕಮಲ ಹ್ಯಾರಿಸ್ ಅಜ್ಜ-ಅಜ್ಜಿ ಪಿ.ವಿ ಗೋಪಾಲನ್- ರಾಜಂ ದಂಪತಿಗಳು ತಿರುವಾರೂರು ಜಿಲ್ಲೆಯ ಮನ್ನಾರ್‍ಗುಡಿ ಪೈಂಘನಾಡ್ ತುಳಸೇಂದ್ರಪುರಂನಲ್ಲಿ ವಾಸವಿದ್ದರು. ಗೋಪಾಲನ್ ಬ್ರಿಟಿಷ್ ಆಳ್ವಿಕೆಯಲ್ಲಿ ಸಿವಿಲ್ ಸರ್ವಿಸ್ ಅಧಿಕಾರಿಯಾಗಿದ್ದರು. ಅವರ ಮಗಳು ಶ್ಯಾಮಲಾ ಗೋಪಾಲನ್ ಪ್ರಮುಖ ಕ್ಯಾನ್ಸರ್ ತಜ್ಞೆಯಾಗಿದ್ದು ಅರ್ಥಶಾಸ್ತ್ರಜ್ಞ ಜಮೈಕದ ಡೊನಾಲ್ಡ್ ಹ್ಯಾರಿಸ್‍ರನ್ನು ಮದುವೆಯಾಗಿದ್ದು ಇವರಿಗೆ ಕಮಲ ಹ್ಯಾರಿಸ್ ಜನಿಸಿದ್ದರು. ಮದುವೆ ನಡೆಯುವ ಮೊದಲು ಶ್ಯಾಮಲಾ ಕ್ಯಾಲಿಪೋರ್ನಿಯದಲ್ಲಿ ಉದ್ಯೋಗದಲ್ಲಿದ್ದರು.

ಈ ದಂಪತಿಗೆ 1964ರಲ್ಲಿ ಕಮಲ ಜನಿಸಿದ್ದರು. ವಿವಾಹ ವಿಚ್ಛೇದನ ಮಾಡಿಕೊಂಡ ಬಳಿಕ ಶ್ಯಾಮಲಾ ಗೋಪಾಲನ್ ಕಮಲರನ್ನು ಒಬ್ಬರೇ ಸಾಕಿದ್ದರು. 2009ರಲ್ಲಿ ಶ್ಯಾಮಲಾ ನಿಧನರಾದರು. ಚೆನ್ನೈಯಲ್ಲಿ ವಾಸಿಸುತ್ತಿರುವ ತಾಯಿಯ ಸಹೋದರಿ ಡಾ.ಸರಳಾ ಗೋಪಾಲನ್ ದಿಲ್ಲಿಯಲ್ಲಿರುವ ಮಾವ ಬಾಲಚಂದ್ರನ್ ಗೋಪಾಲನ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾರೆ. ಕಮಲ ಹ್ಯಾರಿಸ್‍ರನ್ನು ಗ್ರಾಮದ ಜನತೆ ಅಭಿನಂದಿಸುತ್ತಿದೆ ಎಂದು ಗ್ರೀನ್ ಸಿಟಿ ಅಧ್ಯಕ್ಷ ಸುಧಾಕರನ್ ಹೇಳಿದರು.