ಎರಡನೆ ಹಂತದಲ್ಲಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿಗಳಿಗೆ ಕೊರೋನ ವ್ಯಾಕ್ಸಿನ್

0
349

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೋನ ವ್ಯಾಕ್ಸಿನ್ ವಿತರಣೆಯ ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎಲ್ಲ ಮುಖ್ಯಮಂತ್ರಿಗಳು ವ್ಯಾಕ್ಸಿನ್ ಹಾಕಿಸಿಕೊಳ್ಳಲಿದ್ದಾರೆ. ಎರಡನೇ ಹಂತದಲ್ಲಿ 50ವರ್ಷ ಮೇಲ್ಪಟ್ಟವರಿಗೆ ಗಂಭೀರ ರೋಗ ಸಮಸ್ಯೆ ಇರುವವರಿಗೆ ವ್ಯಾಕ್ಸಿನ್ ಕೊಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಜೊತೆಗೆ 50 ವರ್ಷ ಮೇಲ್ಪಟ್ಟು ವಯಸ್ಸಿನ ಎಲ್ಲ ಸಂಸದರು, ಶಾಸಕರಿಗೆ ವ್ಯಾಕ್ಸಿನ್ ಚುಚ್ಚಲಾಗುವುದು.

ದೇಶದಲ್ಲಿ ಜನವರಿ 16ಕ್ಕೆ ವ್ಯಾಕ್ಸಿನ್ ವಿತರಣೆ ಆರಂಭವಾಗಿದೆ. ಸೆರಂ ಇನ್ಸ್ಟಿಟ್ಯೂಟ್‍ ಆಫ್ ಇಂಡಿಯಾದ ಕೊವಿಶೀಲ್ಡ್, ಭಾರತ್ ಬಯೊಟೆಕ್ನಿಕ್‍ನ ಕೊವಾಕ್ಸಿನ್‌ನ ತುರ್ತು ಉಪಯೋಗಕ್ಕೆ ಅನುಮತಿಸಲಾಗಿದೆ. ಆರಂಭಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಇತರ ಮುಂಚೂಣಿ ಯೋಧರಿಗೆ ವ್ಯಾಕ್ಸಿನ್ ಕೊಡಲಾಗುತ್ತಿದೆ.