”ಆತ್ಮ ನಿಯಂತ್ರಣದ ಮೂಲಕ ಮನಸ್ಸನ್ನು ಗೆಲ್ಲಬಹುದು. ಮನಸ್ಸನ್ನು ಜಯಿಸುವ ಕೆಲಸ ಉಪವಾಸ ಮಾಡುತ್ತದೆ”: ಸೌಹಾರ್ದ ಇಫ್ತಾರ್ ಕೂಟದಲ್ಲಿ ರಿಯಾಝ್ ರೋಣ

0
250

ಸನ್ಮಾರ್ಗ ವಾರ್ತೆ

ಚಿಕ್ಕಮಗಳೂರು: ”ಆತ್ಮ ನಿಯಂತ್ರಣದ ಮೂಲಕ ಮನಸ್ಸನ್ನು ಗೆಲ್ಲಬಹುದು. ಮನಸ್ಸನ್ನು ಜಯಿಸುವ ಕೆಲಸ ಉಪವಾಸ ಮಾಡುತ್ತದೆ, ಉಪವಾಸ ವ್ರತ ಮನುಷ್ಯನಿಗೆ ಸಕಲ ಕೆಡುಕುಗಳಿಂದ ದೂರ ಉಳಿಯಲು ಪ್ರೇರಣೆ ನೀಡುತ್ತದೆ” ಎಂದು ಜ.ಇ ಹಿಂದ್ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.

ಅವರು ಸ್ಥಳೀಯ ಹೆರಿಟೇಜ್ ಹಾಲ್ ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಚಿಕ್ಕಮಗಳೂರು ವತಿಯಿಂದ ಹಮ್ಮಿಕೊಂಡಿದ್ದ ಸೌಹಾರ್ದ ಇಫ್ತಾರ್ ಕೂಟವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿಗಳಾದ ಶ್ರೀ ಎಂ ಸಿ ಪ್ರಕಾಶ್ “ಸೌಹಾರ್ದ ಸಮಾರಂಭಗಳು ಪ್ರಸಕ್ತ ಸಮಾಜದ ಅಗತ್ಯವಾಗಿದೆ. ಧರ್ಮಗಳ ನಿಜವಾದ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ನಿರಂತರ ನಡೆಯಬೇಕು. ಈ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಚಿಕ್ಕಮಗಳೂರು ನಡೆಸುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ರಿಝ್ವಾನ್ ಖಾಲಿದ್, ಜಿಲ್ಲಾ ಸಂಚಾಲಕರು ಜ.ಇ ಹಿಂದ್ ಚಿಕ್ಕಮಗಳೂರು ಪ್ರಾಸ್ತಾವಿಕ ಭಾಷಣ ಮಾಡಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.