ಕೇರಳ: 140 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಮತಗಳನ್ನು ಹೊಂದಿದವರ ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ

0
514

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ರಾಜ್ಯದಲ್ಲಿ 140 ವಿಧಾನಸಭಾ ಕ್ಷೇತ್ರಗಳಿದ್ದು ಇಲ್ಲಿ ಎರಡು ಮತಗಳನ್ನು ಹೊಂದಿದವರಿದ್ದಾರೆಯೇ ಎಂದು ಪರಿಶೀಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿ ಢೀಕಾರಾಮ್ ಮೀನ ಸುತ್ತೋಲೆ ಹೊರಡಿಸಿದ್ದಾರೆ.

ಎರಡು ಮತಗಳನ್ನು ಹೊಂದಿದವರಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಎಲ್ಲ ದೂರುಗಳನ್ನು ಒಟ್ಟಿಗೆ ಪರಿಶೀಲಿಸಬೇಕು ಮತ್ತು ವಿಶೇಷ ಅಧಿಕಾರಿಗಳನ್ನು ನೇಮಿಸಿ 140 ವಿಧಾನಸಭಾ ಕ್ಷೇತ್ರದಲ್ಲಿ ಅವಳಿ ಮತ ಹೊಂದಿದವರು ಇರುವ ಬಗ್ಗೆ ಪರಿಶೀಲನೆ ನಡೆಯಬೇಕು ಎಂದು ಢೀಕಾರಾಂ ಮೀನ ಆದೇಶಿಸಿದ್ದಾರೆ.

ಗುರುವಾರದೊಳಗೆ ಸಾಫ್ಟ್‌ವೇರ್ ಉಪಯೋಗಿಸಿ ಪರಿಶೀಲನೆಯನ್ನು ಪೂರ್ತಿಗೊಳಿಸಬೇಕು. ಆ ನಂತರ ಎರಡು ಮತಗಳನ್ನು ಹೊಂದಿದವರ ಪಟ್ಟಿಯನ್ನು ತಯಾರಿಸಬೇಕು. ಈ ಪಟ್ಟಿಯನ್ನು ರಾಜಕೀಯ ಪಾರ್ಟಿಗಳಿಗೆ ಕೊಡಬೇಕು. ಜೊತೆಗೆ ಎರಡು ಮತಗಳನ್ನು ಹೊಂದಿರುವವರನ್ನು ಮತಗಟ್ಟೆ ಅಧಿಕಾರಿಗಳು ನೇರವಾಗಿ ಭೇಟಿಯಾಗಿ ಈ ವಿಷಯವನ್ನು ಅವರಿಗೆ ತಿಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಮುಖ್ಯಚುನಾವಣಾಧಿಕಾರಿ ಸೂಚಿಸಿದ್ದಾರೆ.