ಲೋಕಸಭಾ ಚುನಾವಣೆ: ಮೋದಿ ವಿರುದ್ಧ ನಾಮಪತ್ರ ತಿರಸ್ಕೃತ ತೇಜ್‍ಬಹಾದೂರ್ ಅರ್ಜಿ ಸ್ವೀಕರಿಸಿದ ಅಲಹಾಬಾದ್ ಹೈಕೋರ್ಟು

0
550

ರೋವಡಿ,ಜು.13: ಸೇನಾ ಜವಾನರಿಗೆ ಕೆಟ್ಟ ಆಹಾರ ಕೊಟ್ಟ ವೀಡಿಯೊ ವೈರಲ್ ಮಾಡಿದ್ದಕ್ಕಾಗಿ ಬಿಎಸ್‍ಎಫ್‍ನಿಂದ ವಜಾಗೊಂಡ ತೇಜ್ ಬಹಾದೂರ್ ಯಾದವ್ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಅದನ್ನು ಚುನಾವಣಾಧಿಕಾರಿಗಳು ರದ್ದು ಮಾಡಿದ್ದರು. ಈಗ ತೇಜ್‍ಬಹಾದೂರ್ ಚುನಾವಣೆಯನ್ನು ರದ್ದುಪಡಿಸಲು ರವಿವಾರ ಅರ್ಜಿ ಹಾಕಿದ್ದು ಕೋರ್ಟು ಅದನ್ನು ಸ್ವೀಕರಿಸಿದೆ. ತೇಜ್‍ಬಹಾದೂರ್ ಆರು ಮಂದಿಯನ್ನು ಪ್ರತಿವಾದಿಯನ್ನಾಗಿ ಮಾಡಿದ್ದಾರೆ.

1.ಮುಖ್ಯ ಚುನಾವಣಾ ಆಯುಕ್ತ,
2.ಚುನಾವಣಾ ನಿರೀಕ್ಷಕ ಕೆ. ಪ್ರವೀಣ್ ಕುಮಾರ್
2. ಜಿಲ್ಲಾ ಚುನಾವಣಾಧಿಕಾರಿ ಸುರೇಂದ್ರ ಸಿಂಗ್
4. ನರೇಂದ್ರ ಮೋದಿ
5. ಅಜ್ಞಾತ ಸ್ವತಂತ್ರ ಅಭ್ಯರ್ಥಿ
6. ಒಂದು ಟಿವಿ ಚ್ಯಾನೆಲ್

ನಾನು ಎಲ್ಲ ದಾಖಲೆಗಳನ್ನು ನೀಡಿದ್ದೆ ಆದರೆ ನನ್ನ ನಾಮಪತ್ರವನ್ನು ರದ್ದುಪಡಿಸಲಾಯಿತು. ಆದರೆ ಮೋದಿ ತನ್ನ ಕುಟುಂಬದ ಕುರಿತು ವಿವರ ನೀಡಿಲ್ಲ. ಅವರ ನಾಮಪತ್ರವೂ ರದ್ದು ಆಗಬೇಕಿತ್ತು. ಸರಕಾರದ ಪ್ರಭಾವದಲ್ಲಿ ಚುನಾವಣಾ ಆಯೋಗ ಹಾಗೆ ಮಾಡಿಲ್ಲ” ಎಂದು ತೇಜ್‍ಬಹಾದರ್ ನಂತರ ಹೇಳಿಕೆ ನೀಡಿದರು. ರವಿವಾರದಂದು ಅರ್ಜಿಯನ್ನು ಸ್ವೀಕರಿಸಿ ನ್ಯಾಯದ ಹಿರಿಮೆಯನ್ನು ಅಲಹಾಬಾದ್ ಹೈಕೋಟು ಎತ್ತಿ ಹಿಡಿದಿದೆ. ಇದಕ್ಕಾಗಿ ಕೋರ್ಟಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಅವರು ಕೃತಜ್ಞತೆ ಸೂಚಿಸಿದ್ದಾರೆ.

2017ರಲ್ಲಿ ಬಿಎಸ್‍ಎಫ್‍ನಲ್ಲಿ ಸೇನಾ ಜವಾನರಿಗೆ ಕೊಡುತ್ತಿರುವ ಕೀಳ್ಮಟ್ಟದ ಆಹಾರದ ಕುರಿತು ಧ್ವನಿ ಎತ್ತಿದ್ದರು. ಸೇನೆಯ ಇಂತಹ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ತೇಜ್‍ಬಹಾದೂರರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಅವರು ನಂತರ ವಾರಣಾಸಿಯಿಂದ ಮೋದಿಯ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಅದನ್ನು ದಾಖಲೆ ಸರಿಯಿಲ್ಲ ಎಂಬ ನೆಪದಲ್ಲಿ ಚುನಾವಣಾ ಆಯೋಗ ತಿರಸ್ಕರಿಸಿತ್ತು.