ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 19: ಕೊರೊನಾ ವೈರಸ್ ಮನುಷ್ಯ ನಿರ್ಮಿತವಲ್ಲ, ಪ್ರಕೃತಿಯಿಂದುಂಟಾಗಿದ್ದೆಂದು ಭಾರತದ ಚೀನ ರಾಯಭಾರಿ ಸುನ್ವೆಯ್ ಡೊಂಗ್ ಹೇಳಿದ್ದಾರೆ. ಕೊರೊನಾ ವೈರಸ್ ಭಯಾನಕ, ಆದರೆ ಅದಕ್ಕಿಂತಲೂ ಭೀಕರವಾದ ಅಪಪ್ರಚಾರ ವೈರಸ್ ಕುರಿತು ನಡೆಯುತ್ತಿದೆ ಎಂದು ಅವರು ಹೇಳಿದರು. ವುಹಾನದ ವೈರಾಲಾಜಿ ಇನ್ಸ್ಟಿಟ್ಯೂಟ್ ನಿಂದ ವೈರಸ್ ಸೋರಿಕೆಯಾಗಿದೆ ಎಂಬ ಆರೋಪಕ್ಕೆ ಅವರು ಉತ್ತರಿಸುತ್ತಿದ್ದರು.
ವೈರಸ್ ಮನುಷ್ಯ ನಿರ್ಮಿತವೆಂಬುದಕ್ಕೆ ಸಾಕ್ಷ್ಯಗಳಿಲ್ಲ. ಪ್ರಕೃತಿಯಿಂದಿದು ವ್ಯಾಪಿಸಿದ್ದೆಂಬ ನಂಬಿಕೆಯಿದೆ. ಕೊರಾನಾ ವೈರಸ್ ಪ್ರತಿರೋಧಕ್ಕೆ ಭಾರತ ನೀಡಿದ ಸಹಕಾರಕ್ಕೆ ಅವರು ಕೃತಜ್ಞತೆ ಸೂಚಿಸಿದರು. 2003ರಲ್ಲಿ ಸಾರ್ಸ್ ರೋಗವುಂಟಾದಾಗ ಅಂದು ಅಂದಿನ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಚೀನಕ್ಕೆ ಭೇಟಿ ನೀಡಿದ್ದನ್ನು ಅವರು ಸ್ಮರಿಸಿಕೊಂಡರು.
ಕೊರೊನಾ ವೈರಸ್ ಚೀನದಲ್ಲಿ ಈವರೆಗೆ 1900 ಮಂದಿಯನ್ನು ಬಲಿಪಡೆದಿದೆ. 72,000 ಮಂದಿಗೆ ವೈರಸ್ ಬಾಧೆ ತಗುಲಿದೆ.












