ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 17: ಕೊರೊನಾ ವೈರಸ್ ಕೇವಲ ವೈರಸ್ ಅಲ್ಲ. ಮಾಂಸಾಹಾರಿಗಳ ನಿಗ್ರಹಕ್ಕೆ ಹುಟ್ಟಿಬಂದ ಅವತಾರವೆಂದು ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ. ಮಾಂಸಾಹಾರಿಗಳಿಗೆ ಇರುವ ಸಂದೇಶ ಕೊರೊನಾ ಬಾಧೆ ಎಂದವರು ಹೇಳಿದ್ದಾರೆ.
ಮಾರಕ ಕೊರೊನಾ ವೈರಸ್ ವಿರುದ್ಧ ಜಗತ್ತಿಡೀ ಕಟ್ಟೆಚ್ಚರದಲ್ಲಿರುವಾಗ ಇಂತಹ ವಿಚಿತ್ರ ಹೇಳಿಕೆಯನ್ನು ಚಕ್ರಪಾಣಿ ನೀಡಿದ್ದಾರೆ. ಅದು ನರಸಿಂಹ ಸ್ವಾಮಿ ಅವತಾರ ಎಂದವರು ಹೇಳಿದ್ದಾರೆ. ಮಾತ್ರವಲ್ಲ ವೈರಸ್ ನಿಯಂತ್ರಣಕ್ಕೆ ಅವರು ಉಪಾಯ ಕೂಡ ಹೇಳಿದ್ದಾರೆ. ಚೀನದ ಅಧ್ಯಕ್ಷ ಶಿ ಜಿನ್‍ಪಿಂಗ್ ಅವರು ಕೊರೊನಾ ವೈರಸ್ ನ ಮೂರ್ತಿ ಮಾಡಿ ಪ್ರಾರ್ಥಿಸಬೇಕು. ಚೀನದಲ್ಲಿ ಮಾಂಸ ತಿನ್ನುವ ಎಲ್ಲರೂ ಇತರ ಜೀವಿಗಳಿಗೆ ಹಾನಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಹೀಗಾದರೆ ಕೊರೊನಾ ಇಲ್ಲದಾಗುತ್ತದೆ ಎಂದು ಚಕ್ರಪಾಣಿ ಹೇಳಿದರು. ತನ್ನ ಸಲಹೆಯನ್ನು ಚೀನದವರು ಪಾಲಿಸಿದರೆ ಈ ಅವತಾರ ಅದರ ಲೋಕಕ್ಕೆ ಮರಳಿ ಹೋಗಲಿದೆ ಎಂದು ಅವರು ಹೇಳಿದರು.
ಭಾರತೀಯರು ಕೊರೊನಾಕ್ಕೆ ಹೆದರಬೇಕಾದ ಅಗತ್ಯ ಇಲ್ಲ. ದೇವರಲ್ಲಿ ನಂಬಿಕೆ ಮತ್ತು ದನಗಳ ರಕ್ಷಣೆ ಮಾಡುತ್ತಿರುವುದರಿಂದ ಕೊರೊನಾ ಭಾರತವನ್ನು ಬಾಧಿಸುವುದಿಲ್ಲ. ಅಲ್ಲದೆ, ಭಾರತದಲ್ಲಿ ಮೂವರಿಗೆ ಕೊರೊನಾ ಬಾಧಿಸಿದ್ದನ್ನು ಅವರು ಒಪ್ಪಲು ನಿರಾಕರಿಸಿದ್ದಾರೆ.












