ದುಬೈಯಲ್ಲಿ ವಿವಾಹ ಸಮಾರಂಭಗಳಿಗೆ ಅನುಮತಿ: ಗರಿಷ್ಟ 200 ಮಂದಿಗೆ ಅವಕಾಶ

0
745

ಸನ್ಮಾರ್ಗ ವಾರ್ತೆ

ದುಬೈಯಲ್ಲಿ ವಿವಾಹ ಸಮಾರಂಭಗಳಿಗೆ ಮತ್ತು ಸಣ್ಣ
ಸಭೆ-ಸಮಾರಂಭಗಳಿಗೆ ಅನುಮತಿ ನೀಡಲಾಗಿದೆ. ಹೋಟೆಲುಗಳು, ಹಾಲ್‌ಗಳು ಮತ್ತು ವಿವಾಹ ಮಂಟಪಗಳಲ್ಲಿ ಗರಿಷ್ಠ 200 ಮಂದಿ ಭಾಗವಹಿಸಬಹುದು ಎಂದು
ಸರಕಾರದ ಆದೇಶ ತಿಳಿಸಿದೆ. ಮನೆ ಅಥವಾ ಸಣ್ಣ ಚಪ್ಪರದಲ್ಲಿ 30 ಮಂದಿಗೆ ಭಾಗವಹಿಸಬಹುದು.

4 ಗಂಟೆಗಿಂತ ಹೆಚ್ಚು ಸಮಯ ಯಾವುದೇ ಕಾರ್ಯಕ್ರಮ ನಡೆಯಬಾರದು. ಹಿರಿಯರು ಮತ್ತು ಕಾಯಿಲೆ ಇರುವವರು ಸಮಾರಂಭಗಳಲ್ಲಿ ಭಾಗವಹಿಸಬಾರದು. ಎಲ್ಲರೂ ಮಾಸ್ಕ್ ಧರಿಸಬೇಕು. ಕುಳಿತುಕೊಂಡಾಗ ಮಾತ್ರ ಮಾಸ್ಕನ್ನು ತೆಗೆಯಬಹುದು. ಒಂದು ಟೇಬಲ್ಲಿನ ಎದುರು ಐದು ಮಂದಿಗಿಂತ ಹೆಚ್ಚು ಮಂದಿ ಕುಳಿತುಕೊಳ್ಳಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ.