ಮನೆಯ ಹೊರಗೆ ಪೋಸ್ಟರ್ ಅಂಟಿಸಿದ ಬೆನ್ನಿಗೆ ಕೋವಿಡ್ ರೋಗಿಗಳನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳಲಾಗುತ್ತಿದೆ- ಸುಪ್ರೀಂ ಕೋರ್ಟ್

0
359

ಸನ್ಮಾರ್ಗ ವಾರ್ತೆ

ನವದೆಹಲಿ: ಮನೆಗಳ ಹೊರಗೆ ಪೋಸ್ಟರ್‌ಗಳನ್ನು ಅಂಟಿಸಿದ ನಂತರ ಕೊರೋನವೈರಸ್ ರೋಗಿಗಳನ್ನು “ಅಸ್ಪೃಶ್ಯರು” ಎಂಬಂತೆ ಪರಿಗಣಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರವು, ಇಂತಹ ನಿಯಮವನ್ನು ಸೂಚಿಸಿಲ್ಲ ಮತ್ತು ಕೆಲವು ರಾಜ್ಯಗಳು ಸ್ವಯಂ ಕೊರೋನ ವೈರಸ್ ಹರಡುವುದನ್ನು ತಡೆಯಲು ಈ ಮಾರ್ಗವನ್ನು ಅನುಸರಿಸುತ್ತಿವೆ. “ಇದರ ಉದ್ದೇಶವು ಅಪರಿಚಿತರು ಅಜಾಗರೂಕತೆಯಿಂದ ಮನೆಗೆ ಪ್ರವೇಶಿಸಬಾರದು” ಎಂದು ಕೇಂದ್ರಕ್ಕೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.