ಕೊರೊನದ 3ನೇ ಅಲೆ ಆಗಸ್ಟ್ ನಲ್ಲಿ ಆರಂಭವಾಗಿ ಸೆಪ್ಟಂಬರಿನಲ್ಲಿ ತೀವ್ರಗೊಳ್ಳಲಿದೆ: ಎಸ್‍ಬಿಐ ವರದಿ

0
524

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೋರೊನ ಎರಡನೆ ಅಲೆಯ ಬಳಿಕ ಮೂರನೇ ಅಲೆಯು ಅಪ್ಪಳಿಸಲಿದೆ ಎಂಬ ವರದಿ ಬಂದಿದೆ. ಕೊರೊನದ ಮೂರನೇ ಅಲೆ ಬೇಗನೆ ಬರಲಿದೆ ಎಂದು ಎಸ್‍ಬಿಐ ಅಧ್ಯಯನ ವರದಿ ತಿಳಿಸಿದ್ದು, ಭಾರತದಲ್ಲಿ ಮುಂದಿನ ತಿಂಗಳು ಕೊರೊನ ಅಲೆ ಶುರುವಾಗಿ ಸೆಪ್ಟಂಬರಿನಲ್ಲಿ ತೀವ್ರ ಹರಡುವಿಕೆಯ ಹಂತವನ್ನು ತಲುಪಲಿದೆ ಎಂದು ಎಸ್‍ಬಿಐ ಅಧ್ಯಯನ ವರದಿ ತಿಳಿಸಿದೆ.

ಈಗಿನ ಸೂಚನೆಯನ್ನು ಪರಿಗಣಿಸಿದರೆ ಜುಲೈ ಎರಡನೇ ವಾರದಲ್ಲಿ ಕೊರೊನ ಪೀಡಿತರ ಸಂಖ್ಯೆಯು 10,000ರಷ್ಟಕ್ಕೆ ಸೀಮಿತಗೊಳ್ಳಲಿದೆ. ಆದರೆ ಆಗಸ್ಟ್ ಮೂರನೇ ವಾರದಲ್ಲಿ ಕೊರೊನ ರೋಗಿಗಳ ಸಂಖ್ಯೆ ಹೆಚ್ಚಳವಾಗಲಿದೆ. ಅದು ಮೂರನೇ ತರಂಗದ ಆರಂಭವಾಗಿರುತ್ತದೆ. ವಾರಗಳು ಕಳೆದಂತೆ ಅದು ಅತೀ ಶೀಘ್ರದಲ್ಲಿ ಹರಡಲಿದ್ದು ಎರಡನೇ ಅಲೆಗಿಂತ ಹೆಚ್ಚು ಸಮಯ ಇದಿರಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಎರಡನೇ ಅಲೆಯಷ್ಟು ಮೂರನೇ ಅಲೆಯೂ ತೀವ್ರವಾಗಿರುತ್ತದೆ. ಆದರೆ ಸಾವಿನ ಸಂಖ್ಯೆ ಕಡಿಮೆ ಇರಲಿದೆ. ಎರಡನೇ ತರಂಗ ಶುರುವಾಗಿ ಮೇ 7ರಂದು 24 ಗಂಟೆಗಳೊಳಗೆ ರೋಗಿಗಳ ಸಂಖ್ಯೆ 4,14,188ಕ್ಕೆ ತಲುಪಿತ್ತು. ದೇಶದಲ್ಲಿ ಈಗ ಕೊರೊನ ಇಳಿಮುಖವಾಗಿದ್ದು ದೇಶದಲ್ಲಿ ಸೋಮವಾರದ ಲೆಕ್ಕ ಪ್ರಕಾರ 39,796 ಮಂದಿಗೆ ರೋಗ ದೃಢಪಟ್ಟಿದೆ. ಒಟ್ಟು ಕೊರೊನ ಪೀಡಿತರ ಸಂಖ್ಯೆ 3,05,85,229 ಆಗಿದೆ. ದೇಶದಲ್ಲಿ ಇದುವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಕೊರೊನದಿಂದ ಮೃತಪಟ್ಟಿದ್ದಾರೆ.