ಕೊರೋನ: ಉತ್ತರ ಪ್ರದೇಶ ಸರಕಾರಕ್ಕೆ ಲುಲು ಗ್ರೂಪ್‍ನಿಂದ 5 ಕೋಟಿ ರೂ. ದೇಣಿಗೆ

0
947

ಸನ್ಮಾರ್ಗ ವಾರ್ತೆ

ಲಕ್ನೋ : ಕೊರೋನ ಪ್ರತಿರೋಧ ಕಾರ್ಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿಯ ಸಂತ್ರಸ್ತರ ನಿಧಿಗೆ ಐದು ಕೋಟಿ ರೂಪಾಯಿಯನ್ನು ಲುಲು ಗ್ರೂಪ್ ಅಧ್ಯಕ್ಷ, ಅನಿವಾಸಿ ಭಾರತೀಯ ಉದ್ಯಮಿ ಎಂ. ಎ. ಯೂಸುಫಲಿ ಮಾಲಕತ್ವದ ಲುಲು ಗ್ರೂಪ್ ದೇಣಿಗೆ ನೀಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರ ಅಧಿಕೃತ ವಸತಿಗೆ ಲುಲು ಗ್ರೂಪ್ ಉತ್ತರ ಪ್ರದೇಶ ರೀಜನಲ್ ಡೈರಕ್ಟರ್ ಜೈಕುಮಾರ್, ಜನರಲ್ ಮ್ಯಾನೇಜರ್ ಲಿಜೊ ಜೋಸ್ ಆಲಪ್ಪಾಡ್ ಭೇಟಿ ನೀಡಿ ಚೆಕ್ ನೀಡಿದ್ದಾರೆ.

ಕೊರೊನ ಮಹಾಮಾರಿ ಎದುರಿಸಲು ಉತ್ತರ ಪ್ರದೇಶದ ಜನರಿಗೆ ಲುಲು ಗ್ರೂಪ್ ನೀಡುವ ಸಹಾಯ ಸಹಕಾರಗಳು ವಂದನೀಯ ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳ ಬೆಂಬಲ ಮಹಾಮಾರಿ ನಿಯಂತ್ರಿಸಲು ಹೆಚ್ಚು ಸಹಾಯಕವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕೊರೋನ ತೀವ್ರವಾಗಿ ವ್ಯಾಪಿಸಿದ್ದ ಕಳೆದ ವರ್ಷ ಕೂಡ ಯೂಸುಫಲಿ ಉತ್ತರ ಪ್ರದೇಶ ಸರಕಾರಕ್ಕೆ ಐದು ಕೋಟಿ ರೂಪಾಯಿ ನೀಡಿದ್ದರು.

ಕೊರೊನ ಪ್ರತಿರೋಧ ಚಟುವಟಿಕೆಗಳಿಗಾಗಿ ಕೇರಳ ಸಹಿತ ವಿವಿಧ ರಾಜ್ಯಗಳಿಗೆ ಯೂಸುಫಲಿ ಮಾಲಕತ್ವದ ಲುಲು ಗ್ರೂಪ್ ಸಹಾಯ ಹಸ್ತ ನೀಡಿದೆ. ಕೇರಳ ಮುಖ್ಯಮಂತ್ರಿಯ ಸಂತ್ರಸ್ತರ ನಿಧಿಗೆ ಈಗಾಗಲೇ ಹದಿನೈದು ಕೋಟಿ ರೂಪಾಯಿ ದೇಣಿಗೆಯಾಗಿ ಕೊಟ್ಟಿದ್ದಾರೆ. ಹರಿಯಾಣ ಮುಖ್ಯಮಂತ್ರಿಯ ಕೊರೋನ ಫಂಡ್‍ಗೆ 1.50 ಕೋಟಿ ರೂಪಾಯಿ ಯೂಸುಫಲಿ ನೀಡಿದ್ದಾರೆ. ಪ್ರಧಾನಿಯ ಕೊರೋನ ಫಂಡ್‍ಗೆ 25 ಕೋಟಿ ರೂಪಾಯಿ ನೀಡಿದ್ದಾರೆ.