ಸನ್ಮಾರ್ಗ ವಾರ್ತೆ
ಅಮೃತಸರ: ಕೊರೋನದಿಂದ ತಂದೆ-ತಾಯಿಯನ್ನು ಕಳಕೊಡ ಮಕ್ಕಳಿಗೆ ಪ್ರತಿ ತಿಂಗಳೂ 1500ರೂಪಾಯಿ ಸಾಮಾಜಿಕ ಸುರಕ್ಷಾ ಪೆನ್ಶನ್ ನೀಡಲು ಪಂಜಾಬ್ ಸರಕಾರ ತೀರ್ಮಾನಿಸಿತು. ಈ ಮಕ್ಕಳ ಪದವಿವರೆಗಿನ ಶಿಕ್ಷಣ ಉಚಿತವಾಗಿ ಸರಕಾರ ನೀಡಲಿದೆ. ದುಡಿಯುವವರನ್ನು ಕಳಕೊಂಡ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲಿದೆ. ಜುಲೈ ಒಂದರಿಂದ ಈ ಸೌಲಭ್ಯಗಳ ವಿತರಣೆ ಜಾರಿಗೆ ಬರಲಿದೆ.
ಕೊರೋನದ ಮೂಲಕ ಅನಾಥರಾದ ಮಕ್ಕಳಿಗೆ ಮನೆಯ ಯಜಮಾನನನ್ನು ಕಳಕೊಂಡ ಮಕ್ಕಳ ಕುಟುಂಬಕ್ಕೆ ಸರಕಾರ ಸಂಸ್ಥೆಗಳಲ್ಲಿ ಶಿಕ್ಷಣ ವ್ಯವಸ್ಥೆ ಮಾಡಿಕೊಡಲಿದೆ. ಅವರ ಪೋಷಕನಾಗುವುದು ಸರಕಾರದ ಜವಾಬ್ದಾರಿ ಎಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದರು. ಅನಾಥವರಿಗೆ 21 ವರ್ಷದವರೆಗೆ ಮತ್ತು ಮನೆಯ ಯಜಮಾನರನ್ನು ಕಳೆದುಕೊಂಡ ಕುಟುಂಬಗಳಿಗೆ ಮೂರು ವರ್ಷದವರೆಗೆ ಸೌಲಭ್ಯಗಳು ಲಭ್ಯವಾಗಲಿದೆ. ಆನಂತರ ಪರಿಸ್ಥಿತಿಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿತು.
ಕೊರೋನ ಪೀಡಿತರಿಗೆ 51,000ರೂ. ಗ್ರಾಂಟ್ ನೀಡುವ ಆಶೀರ್ವಾದ್ ಯೋಜನೆ ಜುಲೈ ಒಂದರಿಂದ ಆರಂಭವಾಗಲಿದೆ. ಇವರಿಗೆ ರಾಜ್ಯ ಸರಕಾರ ಸ್ಮಾರ್ಟ್ ರೇಶನ್ ಕಾರ್ಡ್ ಯೋಜನೆ ಪ್ರಕಾರ ಉಚಿತ ರೇಶನ್, ಸರ್ಬತ್ ಸೇಹತ್ ಬಿಮಾ ಯೋಜನೆಯಡಿಯಲ್ಲಿ ಇನ್ಶೂರೆನ್ಸ್ ಕವರೇಜ್ ಸಿಗಲಿದೆ ಎಂದು ಸರಕಾರ ತಿಳಿಸಿತು.
ಕಷ್ಟದಲ್ಲಿರುವ ಕುಟುಂಬಗಳಿಗೆ ಘರ್ ಗೃ ರೋಝ್ಗಾರ್ ಡೆ ಕರೊಬಾರ್ ಮಿಶನ್ ಅಡಿಯಲ್ಲಿ ಯೋಗ್ಯ ಉದ್ಯೋಗ ನೀಡಲು ಸರಕಾರ ಸಹಾಯ ಮಾಡಲಿದೆ.












