ಮಂಜುಗಡ್ಡೆಯಾದ ದಾಲ್ ಸರೋವರ: 30 ವರ್ಷದಲ್ಲಿಯೇ ವಿಪರೀತ ಚಳಿ

0
628

ಸನ್ಮಾರ್ಗ ವಾರ್ತೆ

ಶ್ರೀನಗರ: ಮೂವತ್ತು ವರ್ಷಗಳಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ವಿಪರೀತ ಚಳಿ ಕಂಡು ಬಂದಿದೆ. ಇಲ್ಲಿ ಪ್ರಸಿದ್ಧ ದಾಲ್ ಸರೋವರ ಮಂಜಿನ ಗಡ್ಡೆಯಂತಾಗಿದ್ದು ಮೈನಸ್8.4 ಸೆಲ್ಸಿಯಸ್ ಡಿಗ್ರಿ ಶ್ರೀನಗರ ಉಷ್ಣಾಂಶವಾಗಿದೆ. 1991ರಲ್ಲಿ 11.8 ಮೈನಸ್ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

1991ರ ನಂತರ ಅತ್ಯಂತ ಕಡಿಮೆ ಉಷ್ಣತೆ ಈ ಸಲ ಕಂಡು ಬಂತು. ದಕ್ಷಿಣ ಕಾಶ್ಮೀರದ ಅಮರನಾಥ್ ತೀರ್ಥಾಟನೆಯ ಬೇಸ್ ಕ್ಯಾಂಪ್ ಪಾಲ್‍ಗಾಮ್‍ನಲ್ಲಿ ಕಳೆದ ರಾತ್ರೆ ಮೈನಸ್ 11.1 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು.

ಅತೀಶೈತ್ಯದಿಂದಾಗಿ ನೀರು ಸರಬರಾಜು ವ್ಯವಸ್ಥೆ ಕೂಡ ಏರುಪೇರಾಗಿದ. ಚಳಿಯಲ್ಲಿ ನಳ್ಳಿಯ ನೀರು ಮಂಜುಗಡ್ಡೆಯಂತಾಗಿದೆ. ರಸ್ತೆಯಿಡೀ ಮಂಜುಗಡ್ಡೆಗಳು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.  SDRF ತಂಡ ಮಂಜುಗಡ್ಡೆಯನ್ನು ತುಂಡರಿಸುವ ಕೆಲಸವನ್ನು ಆರಂಭಿಸಿದೆ.