ಒಬ್ಬನೆ ಪ್ರಯಾಣಿಸುವಾಗ ಕಾರಿನೊಳಗೆ ಮಾಸ್ಕ್ ಹಾಕಬೇಕೆಂಬ ನಿಯಮ ಅಸಂಬದ್ಧ: ದೆಹಲಿ ಹೈಕೋರ್ಟ್

0
321

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಾರಿನೊಳಗೆ ಒಬ್ಬನೆ ಪ್ರಯಾಣಿಸುವಾಗ ಮಾಸ್ಕ್ ಧರಿಸಬೇಕೆಂಬ ಸರಕಾರದ ನಿಯಮ ಅಸಂಬದ್ಧ ಎಂದು ದಿಲ್ಲಿ ಹೈಕೋರ್ಟ್ ತಿಳಿಸಿದೆ. ಈ ನಿಯಮ ಈಗಲೂ ಯಾಕಿದೆ ಎಂದು ಅರ್ಥವಾಗುವುದಿಲ್ಲ. ಸ್ವಂತ ಕಾರಿನಲ್ಲಿ ಹೋಗುವ ಮಾಸ್ಕ್ ಧರಿಸಬೇಕೆಂದು ಹೇಳುವುದು ಸಂಪೂರ್ಣ ಅಸಂಬದ್ಧ ಎಂದು ಜಸ್ಟಿಸ್ ವಿಪಿನ ಸಂಕಿ ಮತ್ತು ಜಸ್ಟಿಸ್ ಜಸ್ಮಿತ್ ಸಿಂಗ್‍ರ ಪೀಠ ಸರಕಾರವನ್ನು ಈ ವಿಷಯದಲ್ಲಿ ತರಾಟೆಗೆತ್ತಿಕೊಂಡಿದೆ.

ದಯವಿಟ್ಟು ನಿರ್ದೇಶನ ಸ್ವೀಕರಿಸಿ, ಯಾಕೆ ಈ ಆದೇಶವನ್ನು ಈಗಲೂ ಉಳಿಸಿಕೊಂಡಿದ್ದೀರಿ. ನಿಜವಾಗಿ ಇದು ಅಸಂಬದ್ಧವಾಗಿದೆ. ನಿಮಗೆ ನಿಮ್ಮ ಸ್ವಂತ ಕಾರಿನಲ್ಲಿ ಕುಳಿತುಕೊಳ್ಳುವಾಗ ನೀವು ಮಾಸ್ಕ್ ಧರಿಸಬೇಕೇ ಎಂದು ಕೋರ್ಟು ಪ್ರಶ್ನಿಸಿತು. ದಿಲ್ಲಿಯ ಕೊರೊನ ಹರಡುವಿಕೆಗೆ ಸಂಬಂಧಿಸಿದ ಪ್ರಕರಣ ವಿಚಾರಣೆಯ ವೇಳೆ ಸರಕಾರದ ಪರ ಹಾಜರಾದ ವಕೀಲ ರಾಹುಲ್ ಮೆಹ್ರಾರ ಹೇಳಿಕೆಗಳ ನಂತರ ದಿಲ್ಲಿ ಹೈಕೋರ್ಟುನಿರ್ಣಾಯಕ ಅಭಿಪ್ರಾಯ ಪ್ರಕಟಿಸಿತು.

ಆದರೆ ಒಬ್ಬನೇ ಹೋಗುವಾಗ ವಾಹನದಲ್ಲಿ ಮಾಸ್ಕ್ ಧರಿಸಬೇಕೆಂಬ ದಿಲ್ಲಿ ಸರಕಾರದ ತೀರ್ಮಾನದಲ್ಲಿ ಮಧ್ಯಪ್ರವೇಶಿಸಲು ಏಕ ಸದಸ್ಯ ಪೀಠ ನಿರಾಕರಿಸಿತ್ತು ಎಂಬುದನ್ನು ಸರಕಾರಿ ವಕೀಲರು ಬೆಟ್ಟು ಮಾಡಿದರು. ಕೊರೊನಕ್ಕೆ ಸಂಬಂಧಿಸಿ ಅಂದಿನ ಪರಿಸ್ಥಿತಿ ಈಗ ಇಲ್ಲ. ಈ ವಿಷಯದಲ್ಲಿ ಕೋರ್ಟು ಮಧ್ಯಪ್ರವೇಶಿಸಬಹುದು ಎಂದು ವಕೀಲರು ಹೇಳಿದರು.

ಜನರು ಒಬ್ಬರಾದಾಗ ಕಾರಿನಲ್ಲಿ ಮಾಸ್ಕ್ ಧರಿಸುವ ಯಾವ ಸೂಚನೆಯನ್ನು ನೀಡಿಲ್ಲ ಎಂದು ಆರೋಗ್ಯ ರಾಜ್ಯದ ವಿಷಯವಾಗಿದೆ ಎಂದು ದಿಲ್ಲಿ ಸರಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದೆಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ಕೋರ್ಟಿಗೆ ತಿಳಿಸಿತು.

ಕಾರಿನೊಳಗೆ ಕೂತು ಸಂಚರಿಸುವಾಗ ಮಾಸ್ಕ್ ಧರಿಸಬೇಕೆಂಬ ಆದೇಶದ ವಿರುದ್ಧ ನಾಲ್ಕು ವಕೀಲರು ಕಳೆದ ವರ್ಷ ದಿಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೊರೊನ ಪರಿಸ್ಥಿತಿಯಲ್ಲಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಕಡ್ಡಾವಾಗಿದೆ ಎಂದು ಸೂಚಿಸಿ ದಿಲ್ಲಿ ಹೈಕೋರ್ಟು ಏಕವ್ಯಕ್ತಿ ಪೀಠ ಅರ್ಜಿ ತಿರಸ್ಕರಿಸಿತು.