ಸನ್ಮಾರ್ಗ ವಾರ್ತೆ
ಕೊಚ್ಚಿ: ಮಲಯಾಳಂ ಸುದ್ದಿ ಸಂಸ್ಥೆ ಮೀಡಿಯಾ ವನ್ ಟಿವಿ ಪ್ರಸಾರಕ್ಕೆ ಕೇಂದ್ರ ಸರಕಾರ ಹೇರಿದ್ದ ನಿಷೇಧಕ್ಕೆ ತಡಯಾಜ್ಞೆ ನೀಡಿರುವ ಕೇರಳ ಹೈಕೋರ್ಟ್ ಆದೇಶ ಸೋಮವಾರದವರೆಗೆ (ಫೆ. 7 ರವರೆಗೆ) ಮುಂದೂಡಿದೆ. ಸೋಮವಾರ ಅರ್ಜಿ ಪುನಃ ಪರಿಶೀಲನೆಗೆ ಬರಲಿದ್ದು, ಅಲ್ಲಿಯವರೆಗೂ ಟಿವಿ ಪ್ರಸಾರ ಮುಂದುವರಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದ ಗೃಹ ಇಲಾಖೆಯ ಆದೇಶದ ದಾಖಲೆಗಳನ್ನು ಕೋರ್ಟ್ ಪರಿಶೀಲಿಸುತ್ತಿದ್ದು ಹೆಚ್ಚಿನ ದಾಖಲೆಗಳನ್ನು ಕೊಡಲು ಕೇಂದ್ರ ಸರಕಾರ ಸಮಯಾವಕಾಶ ಕೋರಿದೆ. ನಂತರ ಸೋಮವಾರ ಪುನಃ ಅರ್ಜಿ ಪರಿಗಣನೆಗೆ ಬರಲಿದ್ದು ಅದುವರೆಗೆ ಚ್ಯಾನೆಲ್ ವಿರುದ್ಧ ಆದೇಶಕ್ಕೆ ತಡೆಯಾಜ್ಞೆ ಮುಂದುವರಿಯಲಿದೆ ಎಂದು ಜಸ್ಟಿಸ್ ಎನ್ . ನಗರೇಶ್ ತಿಳಿಸಿದರು.
ಚ್ಯಾನೆಲ್ಗೆ ಹತ್ತು ವರ್ಷದ ಅನುಮತಿ ನೀಡಲಾಗಿದ್ದರೂ ನಿರಂತರ ಅನುಮತಿ ಕೊಟ್ಟಿಲ್ಲ ಎಂದು ಕೇಂದ್ರ ಸರಕಾರ ಪ್ರಕರಣದ ವಿಚಾರಣೆಯ ವೇಳೆ ತಿಳಿಸಿತು. ಅನುಮತಿಯನ್ನು ಗೃಹ ಇಲಾಖೆಯಿಂದ ಪಡೆಯಲು ಮುಂದಾದರೂ ಗೃಹ ಇಲಾಖೆ ಅನುಮತಿ ನೀಡಲಿಲ್ಲ. ಇದಕ್ಕೆ ಸತ್ಯಕ್ಕೆ ದೂರವಾದ ಸುದ್ದಿ ಬಿತ್ತರಿಸಿದ್ದಕ್ಕೆ ಕಾರಣ ಸೂಚಿಸಲು ವಾರ್ತಾ ಪ್ರಸಾರ ಇಲಾಖೆಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅದಕ್ಕೆ ಉತ್ತರವನ್ನೂ ನೀಡಲಾಗಿತ್ತು. ಆದರೆ ಸುರಕ್ಷಾ ಕಾರಣಗಳನ್ನು ಮುಂದಿಟ್ಟು ಕೋರ್ಟಿನಲ್ಲಿ ಇದನ್ನು ಬಹಿರಂಗಪಡಿಸಲಾಗದು ಎಂದು ಕೋರ್ಟಿಗೆ ಮುದ್ರೆ ಹಾಕಿದ ಲಕೋಟೆಯಲ್ಲಿ ದಾಖಲೆ ನೀಡಲಾಗುತ್ತಿದ್ದು ಅದನ್ನು ಪರಿಶೀಲಿಸುವಂತೆ ಕೇಂದ್ರ ಸರಕಾರ ತಿಳಿಸಿದೆ.
ಇದೇ ವೇಳೆ, ಕೇಂದ್ರದ ಅನುಮತಿಯೊಂದಿಗೆ ಕಾರ್ಯವೆಸಗುವ ಚ್ಯಾನೆಲ್ಗೆ ಅನುಮತಿಯನ್ನು ನವೀಕರಿಸುವ ಸಮಯದಲ್ಲಿ ಆರಂಭದಿಂದ ಪ್ರಕ್ರಿಯೆ ಅಗತ್ಯವಿಲ್ಲ ಎಂದು ಅರ್ಜಿದಾರರು ಹೇಳಿದರು. ಅನುಮತಿಗೆ ಸಂಬಂಧಿಸಿದ ವ್ಯವಸ್ಥೆ ನಿಯಮಗಳನ್ನು ಉಲ್ಲಂಘಿಸದೆ ಅನುಮತಿ ರದ್ದು ಅಥವಾ ನವೀಕರಣ ಸಾಧ್ಯವಿಲ್ಲ. ಇಂತಹ ಆರೋಪಗಳು, ದೂರುಗಳು ಚ್ಯಾನೆಲ್ ವಿರುದ್ಧ ಇರಲಿಲ್ಲ. ಈ ಪರಿಸ್ಥಿತಿಯಲ್ಲಿ ಮಾಧ್ಯಮ ಸ್ವಾತಂತ್ರ್ಯ ಮಾತ್ರವಲ್ಲ ಮೂಲಭೂತ ಹಕ್ಕುಗಳನ್ನು ಕೂಡ ಕೇಂದ್ರ ಸರಕಾರ ಉಲ್ಲಂಘಿಸಿದೆ ಎಂದು ಅರ್ಜಿದಾರರು ಬೆಟ್ಟು ಮಾಡಿದರು.












