2024ರ ಉ.ಪ್ರದೇಶ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸ್ಪರ್ಧಿಸಲಿದೆ- ಮಮತಾ ಬ್ಯಾನರ್ಜಿ

0
350

ಸನ್ಮಾರ್ಗ ವಾರ್ತೆ

ಕೊಲ್ಕತಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಿಂದ ತೃಣಮೂಲ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಇದೇ ವೇಳೇ ಸಣ್ಣ ಪಾರ್ಟಿಗಳು ಬಿಜೆಪಿಯ ವಿರುದ್ಧ ಒಟ್ಟುಗೂಡಬೇಕೆಂದು ಅವರು ಕರೆ ನೀಡಿದರು.

ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮಮತಾ ಬ್ಯಾನರ್ಜಿ ಪುನರಾಯ್ಕೆಯಾಗಿದ್ದಾರೆ. ಮಮತಾ ಏಕಮತದಿಂದ ಅಧ್ಯಕ್ಷೆಯಾಗಿ ಆಯ್ಕೆಯಾದರು ಎಂದು ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ತಿಳಿಸಿದರು. ಬಿಜೆಪಿಯ ಟೀಕಾಕಾರದ ಏಳೆಂಟು ಬಿಜೆಪಿ ನಾಯಕರೊಂದಿಗೆ ಮಮತಾ ಬ್ಯಾನರ್ಜಿ ಮಾತಾಡಿದ್ದಾರೆ. ಅವರು ತೃಣಮೂಲ ಕಾಂಗ್ರೆಸ್‍ಗೆ ಸೇರ್ಪಡೆಯಾಗಲು ಬಯಸಿದ್ದಾರೆ ಎಂದು ತಿಳಿಸಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‍ನಲ್ಲಿ ಕಾರ್ಮಿಕರಿಗೆ, ಕೃಷಿಕರು ಮತ್ತು ಜನಸಾಮಾನ್ಯರಿಗೆ ಏನೂ ಇಲ್ಲ ಎಂದು ಮಮತಾ ಹೇಳಿದರು. ಏಜೆನ್ಸಿಗಳಲ್ಲಿ ಅಲ್ಲ ಜನರಿಗೆ ಟಿಎಂಸಿಗೆ ವಿಶ್ವಾಸವಿದೆ ಎಂದು ದಿಲ್ಲಿಯ ಮೊದಲ ಕಾರ್ಯಕಾರಿಣಿ ಸಭೆಯಲ್ಲಿ ಅವರು ಹೇಳಿದರು. ಬಿಜೆಪಿಗೆ ಮೂರು ಆಭರಣಗಳಿವೆ. ಎಂಫೋಸ್‍ಮೆಂಟ್ ಡೈರಕ್ಟರೇಟ್,  ಸಿಬಿಐ ಮತ್ತು ಹಣ. ಬಿಜೆಪಿಗೆ ಪ.ಬಂಗಾಳದಲ್ಲಿ ದಲ್ಲಾಳಿಗಳಿದ್ದಾರೆ. ಅವರು ಪೆಗಾಸಸ್ ಸಾಫ್ಟ್‌ವೇರಿಗಿಂತ ಅಪಾಯಕಾರಿ ಎಂದು ರಾಜ್ಯಪಾಲರಾದ ಜಗದೀಪ್ ಧನ್‍ಕರ್‌ರನ್ನು ಅವರನ್ನು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

1988ರಲ್ಲಿ ಕಾಂಗ್ರೆಸ್‍ನೊಂದಿಗೆ ಸಂಬಂಧ ಕಡಿದುಕೊಂಡ ಬಳಿಕ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ರೂಪಿಸಿದ್ದರು. ಅಂದಿನಿಂದ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮುಂದುವರಿಯುತ್ತಿದ್ದಾರೆ. 2001 ಮತ್ತು 2006ರ ವಿಧಾನಸಭಾ ಚುನಾವಣೆಯಲ್ಲಿ ಸೋತರು 2011ರಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ನಂತರ ನಿರಂತರ ಮೂರನೇ ಬಾರಿಗೆ ಅದು ಅಧಿಕಾರದಲ್ಲಿದೆ.