ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.10: ಫೆಬ್ರುವರಿಯಲ್ಲಿ ದಿಲ್ಲಿಯಲ್ಲಿ ನಡೆದ ಕೋಮು ಗಲಭೆಯ ಸಮಯದಲ್ಲಿ ದುಷ್ಕರ್ಮಿಗಳ ಜೊತೆ ಪೊಲೀಸರು ಕಲ್ಲೆಸೆಯುವ ವೀಡಿಯೊ ಸಾಕ್ಷ್ಯವನ್ನು ದಿಲ್ಲಿ ಸರಕಾರ ಬಯಲುಗೊಳಿಸಿದೆ.
ಪೊಲೀಸರ ಕ್ರೌರ್ಯದ ಏಳು ವೀಡಿಯೊಗಳನ್ನು ದಿಲ್ಲಿ ಗೃಹ ಇಲಾಖೆ ಅಕ್ಟೋಬರ್ ಐದರಂದು ಹೊರಗೆ ಬಿಟ್ಟಿದೆ. ವೀಡಿಯೊದಲ್ಲಿ ಕೆಲವು ಮೊದಲೇ ಬಹಿರಂಗವಾಗಿದ್ದಾದರೂ ಅಧಿಕೃತವಾಗಿ ದಿಲ್ಲಿ ಸರಕಾರ ಹೊರಬಿಟ್ಟದ್ದರಿಂದ ಪೊಲೀಸರು ಎರಡು ದಿನಗಳೊಳಗೆ ಸ್ಪಷ್ಟೀಕರಣ ನೀಡಿದೆ. ಘಟನೆಯ ಕುರಿತ ಮೂರು ವೀಡಿಯೊಗಳಲ್ಲಿ ಇಷ್ಟರಲ್ಲೇ ಕ್ರಮ ತೆಗೆದುಕೊಳ್ಳಲಾಗಿದ್ದು ಉಳಿದ ವೀಡಿಯೊಗಳು ಪರಿಶೀಲಿಸುತ್ತಿದ್ದೇವೆ ಎಂದು ನಾರ್ತ್ ಈಸ್ಟ್ ಡಿಸಿಪಿ ಹೇಳಿದರು.
ದುಷ್ಕರ್ಮಿಗಳೊಂದಿಗೆ ಕೂಡಿಕೊಂಡು ಪೊಲೀಸರು ಒಂದು ವಿಭಾಗದ ಮೇಲೆ ಕಲ್ಲೆಸೆಯುತ್ತಿರುವುದು.ಲ, ಮೊಟ್ಟೆ ಎಸೆಯುವುದು, ಹೊಡೆದು ಅಶಕ್ತರನ್ನಾಗಿಸುವುದು ರಾಷ್ಟ್ರ ಗೀತೆ ಹಾಡಿಸುವುದು, ದುಷ್ಕೃತ್ಯಕ್ಕೆ ಪ್ರೇರೇಪಿಸುವುದು ವೀಡಿಯೊಗಳಲ್ಲಿವೆ. ವೀಡಿಯೊಗಳಲ್ಲಿ ಪೊಲೀಸರು ಮತ್ತು ದುಷ್ಕರ್ಮಿಗಳ ಮುಖ ಸರಿಯಾಗಿ ಕಾಣಿಸುತ್ತಿದೆ.
ಪೊಲೀಸರು ದುಷ್ಕರ್ಮಿಗಳ ಜೊತೆ ಎಲ್ಲಿದ್ದು ಹೀಗೆ ಮಾಡುತ್ತಿದ್ದಾರೆ ಎಂದು ಸರಿಯಾಗಿ ಗೊತ್ತಾಗುವ ರೀತಿಯಲ್ಲಿ ವೀಡಿಯೊದಲ್ಲಿ ಪೊಲೀಸ್ ಔಟ್ಪೋಸ್ಟ್, ಸಮೀಪದ ಅಂಗಡಿಗಳ ಹೆಸರು ಸ್ಥಳದ ಹೆಸರೆಲ್ಲ ಬಂದಿವೆ. ಇದಕ್ಕೆ ಸಂಬಂಧಿಸಿ ತನಿಖೆ ಮಾಡುತ್ತಿದೆ. ಪ್ರತಿಯೊಂದು ದೃಶ್ಯದ ಸಮಯ ಸ್ಥಳ, ದಿನಾಂಕ ಸ್ಪಷ್ಟವಾದ ಬಳಿಕ ಇದಕ್ಕೆ ಸಂಬಂದಿಸಿದ ವರದಿಗಳನ್ನು ಕೂಡಲೇ ಸಲ್ಲಿಸುತ್ತೇವೆ ಎಂದು ಪೊಲೀಸರು ತಿಳಿಸಿದರು. ಪೊಲೀಸರ ಹಲ್ಲೆಯಿಂದ 24 ವರ್ಷದ ಫೈಝಾನ್ ಎಂಬ ಯುವಕ ಮೃತಪಟ್ಟಿದ್ದ.












