ದಿಲ್ಲಿ ಗಲಭೆ: 15 ವರ್ಷದ ಬಾಲಕನನ್ನು ಕೊಂದು ಕೊಳಚೆಗುಂಡಿಗೆ ಎಸೆದ ಪ್ರಕಣದಲ್ಲಿ ಆರೋಪಿಗಳಿಗೆ ಜಾಮೀನು ನಿರಾಕರಣೆ

0
1039

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿಯ ಕೋಮು ಗಲಭೆಯ ವೇಳೆ 15 ವರ್ಷದ ಬಾಲಕನನ್ನು ಕೊಂದು ಕೊಳಚೆ ಗುಂಡಿಗೆ ಎಸೆದ ಆರೋಪಿಗಳಿಗೆ ದಿಲ್ಲಿ ಹೈಕೋರ್ಟು ಜಾಮೀನು ನಿರಾಕರಿಸಿದೆ. ಆರೋಪಿಗಳಾದ ಅಂಕಿತ್ ಚೌಧರಿ, ರಿಷಭ್ ಚೌಧರಿ, ಬೇರೆ ಧರ್ಮದ ಜನರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಸಾಕ್ಷಿಗಳಿವೆ ಎಂದು ಕೋರ್ಟು ತಿಳಿಸಿ ಜಾಮೀನು ನಿರಾಕರಿಸಿದೆ. ಕಳೆದ ವರ್ಷ ಮಾರ್ಚ್ ಒಂದಕ್ಕೆ ಹದಿನೈದು ವರ್ಷದ ಬಾಲಕನ ಮೃತದೇಹ ಗೋಕುಲ್ ಪುರಿಯ ಕೊಳಚೆಗುಂಡಿಯಲ್ಲಿ ಸಿಕ್ಕಿತ್ತು.

ಅಂಕಿತ್ ಚೌಧರಿ, ರಿಷಭ್ ಚೌಧರಿ ತಂಡ ಗೋಕುಲ್ ಪುರಿ ಸೇತುವೆ ಬಳಿ ಅಲ್ಲಿಂದ ಬರುವವರ ಗುರುತು ಕಾರ್ಡು ಪರಿಶೀಲಿಸಿ ಅನ್ಯ ಧರ್ಮೀಯರನ್ನು ಗುರುತಿಸಿ ಕಬ್ಬಿಣದ ರಾಡು ಕಲ್ಲುಗಳಿಗಳಿಂದ ಹೊಡೆದು ಕೊಂದು ಕೊಳಚೆಗೆ ಗುಂಡಿಗೆ ಮೃತದೇಹವನ್ನು ಎಸೆಯುತ್ತಿತ್ತು ಎಂದು ಸಾಕ್ಷಿಗಳು ಸಾಕ್ಷ್ಯ ನೀಡಿದ್ದಾರೆ.

ಮೂರು ಸಾಕ್ಷಿಗಳು ಆರೋಪಿಗಳನ್ನು ಗುರುತಿಸಿವೆ. ಸೆಲ್‍ಫೋನ್ ಟವರ್ ಲೋಕೇಶನ್ ಕೇಂದ್ರೀಕರಿಸಿ ಆರೋಪಿಗಳು ದಾಳಿ ನಡೆದಾಗ ಅಲ್ಲಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅವರ ಫೋನ್‍ಗಳನ್ನು ಅವರು ಮನೆಯಲ್ಲಿ ಇಟ್ಟು ಬಂದಿರಬಹುದು. ಸಾಕ್ಷ್ಯಗಳನ್ನು ಪರಿಗಣಿಸಿ ಆರೋಪಿಗಳಿಗೆ ಜಾಮೀನು ಕೊಡಲಾಗದು ಎಂದು ಕೋರ್ಟು ತಿಳಿಸಿತು.