ಫ್ರೆರ್ಟನಿಟಿ ಮೂವ್ ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಚಾಲನೆ: ಪದಾಧಿಕಾರಿಗಳ ಆಯ್ಕೆ

0
623

ಸನ್ಮಾರ್ಗ ವಾರ್ತೆ

ಮಂಗಳೂರು : ಫ್ರೆರ್ಟನಿಟಿ ಮೂವ್ ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚಾಲನಾ ಸಮಾರಂಭವು ನಗರದ ಟಿ.ಆರ್.ಎಫ್ ಸಭಾಂಗಣದಲ್ಲಿ ನಡೆಯಿತು. ಫ್ರೆರ್ಟನಿಟಿ ಮೂವ್ ಮೆಂಟ್ ನ ರಾಜ್ಯ ಉಪಾಧ್ಯಕ್ಷ ಹುಚ್ಚಂಗಿ ಪ್ರಸಾದ್ ರವರು ಸಂಘಟನೆಯ ಲೋಗೊ ಬಿಡುಗಡೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು. 2021-22ರ ಸಾಲಿನ ಅಧ್ಯಕ್ಷರಾಗಿ ಇಸ್ಮಾಯಿಲ್ ಸಯ್ಯಾಫ್ ಕಲ್ಲಾಪು, ಉಪಾಧ್ಯಕ್ಷರಾಗಿ ಫಝಲ್ ಪಿಲಾರ್, ಕಾರ್ಯದರ್ಶಿಯಾಗಿ ಅಸ್ಗರ್ ಸಿ.ಎಚ್ ಕಲ್ಲಾಪು ಮತ್ತು ಕ್ಯಾಂಪಸ್ ಕಾರ್ಯದರ್ಶಿಯಾಗಿ ಅಬ್ಬು ರಿಹಾನ್ ಅಹ್ಮದ್ ಆಯ್ಕೆಯಾದರು.

ವೆಲ್ಫೇರ್ ಪಾರ್ಟಿ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮೋಹಿನ್ ಕಮರ್ ಮಾತನಾಡಿ “ವಿದ್ಯಾರ್ಥಿ ಶಕ್ತಿಯು ರಾಷ್ಟ್ರದ ಶಕ್ತಿಯಾಗಿದೆ, ಇದು ಕೇವಲ ಒಂದು ಸಮೂಹದ ದ್ವನಿಯಾಗದೆ ಶೋಷಿತರ, ಹಿಂದುಳಿದವರ ದ್ವನಿಯಾಗಬೇಕೆಂದು” ಹೇಳಿದರು.

ವೆಲ್ಫೇರ್ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಡ್ವಕೇಟ್ ಸರ್ಫರಾಝ್ ನೂತನವಾಗಿ ಆಯ್ಕೆಯಾದ ಫ್ರೆರ್ಟನಿಟಿ ಮೂವ್ ಮೆಂಟ್ ಅಧ್ಯಕ್ಷ ಇಸ್ಮಾಯಿಲ್  ಸಯ್ಯಾಫ್ ರಿಗೆ ಹೂಗುಚ್ಚ ನೀಡುವ ಮೂಲಕ ಶುಭಹಾರೈಸಿದರು.

ರಾಜ್ಯಾಧ್ಯಕ್ಷ ರಾದ ತಫ್ಲೀಲ್ ಯು. ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಫ್.ಐ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ದಿವಾಕರ್ ಬೊಳೂರು, ವೆಲ್ಫೇರ್ ಪಾರ್ಟಿ ದ.ಕ ಜಿಲ್ಲಾ ಉಪಾಧ್ಯಕ್ಷೆ ಮರ್ಯಮ್ ಶಹೀರ, ಫ್ರೆರ್ಟನಿಟಿ ಮೂವ್ ಮೆಂಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಝಾಮ್ ದಾವಣಗೆರೆ ಮತ್ತು ಜಿಲ್ಲಾ ಸದಸ್ಯರು ಉಪಸ್ಥಿತರಿದ್ದರು.