ಸೌದಿ ಅರೇಬಿಯಾ: ಮನೆಗೆಲಸದವರು ಇನ್ನು ಮಾಲೀಕನ ಒಪ್ಪಿಗೆ ಇಲ್ಲದೆ ಕೆಲಸ ಬದಲಾಯಿಸಬಹುದು

0
57

ಸನ್ಮಾರ್ಗ ವಾರ್ತೆ

ಬುರೈದಾ: ಮನೆ ಮಾಲೀಕನ ಕಡೆಯಿಂದ ಒಪ್ಪಂದದ ಉಲ್ಲಂಘನೆಯಾಗಿದ್ದರೆ, ಮನೆ ಚಾಲಕ ಮತ್ತು ಮನೆಕೆಲಸದ ಹುದ್ದೆಯಲ್ಲಿರುವವರು ಸ್ವಯಂಪ್ರೇರಣೆಯಿಂದ ಬೇರೆಡೆಗೆ ಉದ್ಯೋಗಕ್ಕೆ ಸೇರ್ಪಡೆಯಾಗಬಹುದು ಎಂದು ಸೌದಿ ಮಾನವ ಹಕ್ಕುಗಳ ಆಯೋಗ (ಎಚ್‌ಆರ್‌ಸಿ) ಹೇಳಿದೆ. ಆಯೋಗದ ಅಧ್ಯಕ್ಷ ಹಾಗೂ ರಾಷ್ಟ್ರೀಯ ಮಾನವ ಕಳ್ಳಸಾಗಣೆ ತಡೆ ಸಮಿತಿ ಅಧ್ಯಕ್ಷರಾದ ಡಾ. ಅವ್ವಾದ್ ಅಲ್ ಅವ್ವಾದ್ ಈ ಸುಧಾರಣೆಗಳನ್ನು ಘೋಷಿಸಿದರು.

ಆರಂಭಿಕ ತರಬೇತಿ ಹಂತ(ಪ್ರೊಬೇಶನ್) ಪೂರ್ಣಗೊಳ್ಳುವ ಮೊದಲು ಉದ್ಯೋಗದಾತನು ಒಪ್ಪಂದವನ್ನು ರದ್ದುಗೊಳಿಸುವುದು, ಕಾರ್ಮಿಕರ ಒಪ್ಪಿಗೆಯಿಲ್ಲದೆ ಇನ್ನೊಬ್ಬರ ಅಡಿಯಲ್ಲಿ ಕೆಲಸಕ್ಕೆ ನಿಯೋಜಿಸುವುದು, ಸರಿಯಾಗಿ ವೇತನವನ್ನು ಪಾವತಿಸದಿರುವುದು, ವಿಶ್ರಾಂತಿ ಇಲ್ಲದೆ ಕೆಲಸ ಮಾಡಿಸುವುದು ಅಥವಾ ಅಪಾಯಕಾರಿ ಕೆಲಸವನ್ನು ಮಾಡಲು  ಒತ್ತಾಯಿಸುವುದು ಇತ್ಯಾದಿ ಸಂದರ್ಭಗಳಲ್ಲಿ ಕಾರ್ಮಿಕರು ಸ್ವಯಂಪ್ರೇರಣೆಯಿಂದ ಇನ್ನೊಬ್ಬ ಉದ್ಯೋಗದಾತರನ್ನು ಅರಸಿಕೊಳ್ಳಬಹುದು ಎಂಬುದು ಸುಧಾರಣೆಗಳಲ್ಲಿ ಪ್ರಮುಖವಾಗಿದೆ.