✍️ ಶಾಝಿಲ್ ಉಸ್ಮಾನ್
ಒಬ್ಬ ಪತ್ರಕರ್ತನ ವಿದಾಯ ಪತ್ರ
ಗಾಝಾದ ಅಲ್ ಶಿಫಾ ಆಸ್ಪತ್ರೆಯ ಮುಂದೆ ಮಾಧ್ಯಮದವರು ಉಳಿದುಕೊಂಡಿದ್ದ ಟೆಂಟ್ ಮೇಲೆ ಇಸ್ರೇಲ್ ಡಿಫೆನ್ಸ್ ಫೋರ್ಸ್ ನಡೆಸಿದ ಬಾಂಬು ದಾಳಿಯಲ್ಲಿ ಅಲ್ ಜಝೀರದ ಫೆಲೆಸ್ತೀನ್ ವರದಿಗಾರರಾದ ಅನಸ್ ಅಲ್ ಶರೀಫ್, ಮುಹಮ್ಮದ್ ಕುರೈಖಿಅï, ಇಬ್ರಾಹೀಮ್ ಸಾಹಿರ್, ಮುಹಮ್ಮದ್ ನೌಫಲ್, ಮೂಮಿನ್ ಅಲಿ ಎಂಬವರು ಹುತಾತ್ಮರಾದರು. ಗಾಝದ ಮೇಲೆ 22 ತಿಂಗಳ ಮೊದಲು ಇಸ್ರೇಲ್ ಶುರುಮಾಡಿದ ವಂಶಹತ್ಯೆಯ ನಡುವೆ 237 ಫೆಲೆಸ್ತೀನಿ ಪತ್ರಕರ್ತರು ಹತ್ಯೆಯಾದರು. ಪ್ರಥಮ ಮತ್ತು ದ್ವಿತೀಯ ವಿಶ್ವ ಯುದ್ಧಗಳು, ವಿಯೆಟ್ನಾಂ ಯುದ್ಧ, ಯುಗೊಸ್ಲಾವ್, ಅಫ್ಘಾನ್, ಇರಾಕ್ ಯುದ್ಧಗಳಲ್ಲಿ ಕೊಲ್ಲಲ್ಪಟ್ಟ ಮಾಧ್ಯಮದವರ ಲೆಕ್ಕಕ್ಕಿಂತ ಇದು ಹೆಚ್ಚು.
ಗಾಝಾದ ಮೂಲೆ ಮೂಲೆಗಳಿಂದ ಸುದ್ದಿಯನ್ನು ಜಗತ್ತಿಗೆ ಕೊಟ್ಟ ಅನಸ್ ಅಲ್ ಶರೀಫ್(28) ಪ್ರತಿಯೊಬ್ಬ ಫೆಲಸ್ತೀನಿಯರನ್ನು ಕಾದಿರುವ ವಿಧಿ ತನ್ನನ್ನೂ ಹುಡುಕಿಕೊಂಡು ಬರಲಿದೆ ಎಂಬುದನ್ನು ಮನಸ್ಸಿನಲ್ಲಿ ಗಟ್ಟಿಯಾಗಿಟ್ಟು ಕೊಂಡಿದ್ದರು. ಅವರು ಬರೆದ ಪತ್ರದ ಕೊನೆ ಸಂದೇಶ ಹೀಗಿತ್ತು-
ಇದು ನನ್ನ ಉಯಿಲು ಮತ್ತು ಕೊನೆಯ ಸಂದೇಶ ಕೂಡ ಆಗಿದೆ. ಈ ಮಾತುಗಳು ನಿಮಗೆ ತಲುಪಿದರೆ ನನ್ನನ್ನು ಕೊಲ್ಲಲು ಮತ್ತು ಈ ಧ್ವನಿಯನ್ನು ನಿಶಬ್ದಗೊಳಿಸುವುದರಲ್ಲಿ ಇಸ್ರೇಲ್ ಯಶಸ್ವಿಯಾಗಿದೆ ಎಂದು ತಿಳಿದುಕೊಳ್ಳಿರಿ.
ಪ್ರಥಮವಾಗಿ ನಿಮಗೆ ದೇವನ ಕರುಣೆ ಅನುಗ್ರಹಗಳು ಮತ್ತು ಶಾಂತಿಯನ್ನು ಹಾರೈಸುವೆನು. ಜಬಲಿಯ ನಿರಾಶ್ರಿತರ ಕ್ಯಾಂಪಿನ ಪರಿಸರದ ಜೀವನ ನೋಡಲು ಶುರುವಾದಂದಿನಿಂದ ನನ್ನ ಜನರ ಬೆಂಬಲ ಮತ್ತು ಶಬ್ದವಾಗಲು ನಾನು ಸಂಪೂರ್ಣ ಶ್ರಮಿಸಿದೆನು. ನಾನೆಷ್ಟು ಶಕ್ತಿಯನ್ನು ಅರ್ಪಿಸಿದ್ದೇನೆ ಎಂಬುದು ಸೃಷ್ಟಿಕರ್ತನಿಗೆ ಗೊತ್ತಿದೆ. ಇನ್ಶಾ ಅಲ್ಲಾಹ್ ಕುಟುಂಬದೊಂದಿಗೆ ಪೂರ್ವಿಕರ ನಾಡಾದ ಅಲ್ ಅಸ್ಕಲಾನ್ (ಅಲ್ ಮಜ್ದಾನ್) ನಗರಕ್ಕೆ ಮರ ಳಲು ಸಾಧ್ಯವಾಗಬಹುದೆಂಬ ನೀರಿಕ್ಷೆಯಲ್ಲಿದ್ದೆನು. ಆದರೆ, ದೇವನ ವಿಧಿ ಬಂದಿದೆ. ಅದು ಅಂತಿಮ ವಿಧಿಯಾಗಿದೆ.
ಜೀವನದಲ್ಲಿ ಎಲ್ಲ ನೋವುಗಳಲ್ಲಿ ನಾನು ಹಾದು ಹೋಗಿದ್ದೇನೆ. ಯಾತನೆಗಳು, ನಷ್ಟಗಳ ರುಚಿ ಅರಿತಿದ್ದೇನೆ. ಆದರೂ ವಿಷಯ ತಿರುಚದೆ ಸುಳ್ಳು ವರದಿಯನ್ನು ನೀಡದೆ ಸತ್ಯವನ್ನು ಯಥಾರೀತಿ ಮುಂದಿಟ್ಟಿದ್ದೇನೆ. ಅದಕ್ಕೆ ಒಮ್ಮೆಯೂ ಹಿಂಜರಿದಿಲ್ಲ. ಒಂದೂವರೆ ವರ್ಷಕ್ಕಿಂತ ಹೆಚ್ಚು ಕಾಲ ನಮ್ಮ ಜನರು ಎದುರಿಸುತ್ತಿರುವ ಸಾಮೂಹಿಕ ಕೊಲೆಯನ್ನು ತಡೆಯಲು ಏನೂ ಮಾಡದವರು. ಮೌನ ಪಾಲಿಸಿದವರು, ಕೊಲೆಯಾಗುವುದನ್ನು ಸರಿ ಎಂದವರು, ನಮ್ಮ ಉಸಿರುಗಟ್ಟಿಸಿದವರು, ನಮ್ಮ ಮಕ್ಕಳು ಸ್ತ್ರೀಗಳ ದೇಹ ಚದರುರಿಕೊಂಡಿರುವುದು ನೋಡಿಯೂ ಅರ್ಥವಾಗದವರು… ಇವರ ವಿರುದ್ಧ ಪ್ರಪಂಚದೊಡೆಯನೇ ಸಾಕ್ಷಿ. ಮುಸ್ಲಿಂ ಜಗತ್ತಿನ ಕಿರೀಟವಾದ ಜಗತ್ತಿನ ಪ್ರತಿಯೋರ್ವ ಸ್ವತಂತ್ರ ವ್ಯಕ್ತಿಯ ಹೃದಯ ಮಿಡಿತವಾದ ಫೆಲೆಸ್ತೀನನ್ನು ನಿಮಗೆ ವಹಿಸಿ ಕೊಡುತ್ತಿದ್ದೇನೆ.
ಇಲ್ಲಿನ ಜನರನ್ನು ನಿಮಗೆ ವಹಿಸುತ್ತಿದ್ದೇನೆ. ಇಲ್ಲಿನ ನಿಷ್ಕಳಂಕ ಬಾಲ್ಯಗಳಿಗೆ ಕನಸು ಕಾಣಲು ಸುರಕ್ಷಿತವಾಗಿ ಶಾಂತಿಯಿಂದ ಜೀವನ ನಡೆಸಲು ಒಮ್ಮೆ ಕೂಡ ಅವಕಾಶ ಸಿಕ್ಕಿಲ್ಲ. ಸಾವಿರಾರು ಟನ್ ಭಾರದ ಬಾಂಬುಗಳು ಮಿಸೈಲುಗಳ ನಡುವೆ ಅಪ್ಪಚ್ಚಿಯಾದ ಅವರ ನಿರ್ಮಲ ದೇಹಗಳು ಗೋಡೆಗಳೆದುರು ಚದರಿ ಬಿದ್ದಿದೆ.
ನಿಮ್ಮನ್ನು ಮೌನವಾಗಿಸಲು ಸಂಕೋಲೆಗಳನ್ನೋ ನಿಮ್ಮನ್ನು ನಿಯಂತ್ರಿಸಲು ಗಡಿಗಳನ್ನೋ ಕೊಡಬೇಡಿ ಎಂದು ನಾನು ಮನವಿ ಮಾಡುತ್ತಿದ್ದೇನೆ. ಅಪಹರಿಸಲ್ಪಟ್ಟಿರುವ ನಮ್ಮ ಮಾತೃ ದೇಶದ ಮೇಲೆ ಅಂತಸ್ತಿನ, ಸ್ವಾತಂತ್ರ್ಯದ ಸೂರ್ಯೋದಯ ಸಾಧ್ಯಮಾಡುವ ವರೆಗೆ ನಾಡಿನ ಮತ್ತು ಜನರ ವಿಮೋಚನೆಯ ಸೇತುವೆ ನೀವು ಆಗಬೇಕಾಗಿದೆ.
ನನ್ನ ಕುಟುಂಬವನ್ನು ನಾನು ನಿಮಗೆ ಬಿಟ್ಟು ಹೋಗುತ್ತಿದ್ದೇನೆ. ನನ್ನ ಕಣ್ಣಿನ ಬೆಳಕು ಅದು ಪ್ರೀತಿಯ ಮಗಳು ಶಾಮಿನ್. ನಾನು ಕನಸು ಕಂಡಿದ್ದ ರೀತಿಯಲ್ಲಿ ಬೆಳೆದು ದೊಡ್ಡದಾಗುವುದನ್ನು ನೋಡಲು ನನ್ನಿಂದಾಗಿಲ್ಲ. ಪ್ರಿಯ ಪುತ್ರ ಸಲಾಹ್ ಶಕ್ತಿಶಾಲಿಯಾಗಿ ಬೆಳೆದು ನಾನು ವಹಿಸಿಕೊಂಡ ದೌತ್ಯವನ್ನು ಮುಂದಕ್ಕೆ ಕೊಂಡು ಹೋಗಲು ಆಗುವ ರೀತಿಯಲ್ಲಿ ಅವನಿಗೆ ದಾರಿ ತೋರಿಸಬೇಕೆಂದು ನನಗಿತ್ತು.
ನನ್ನ ಪ್ರೀತಿಯ ಅಮ್ಮನನ್ನೂ ನಾನು ನಿಮಗೆ ವಹಿಸಿಕೊಡುತ್ತೇನೆ. ಅವರ ಅನುಗ್ರತೀತ ಪ್ರಾರ್ಥನೆಯು ನನ್ನನ್ನು ಈ ಸ್ಥಾನಕ್ಕೆ ತಲುಪಿಸಿದೆ. ಅವರ ಪ್ರಾರ್ಥನೆಗಳು ನನಗೆ ಕೋಟೆ ಆಗಿತ್ತು.
ನನ್ನ ಜೀವನ ಸಂಗಾತಿ ಪ್ರಿಯ ಪತ್ನಿ ಉಮ್ಮು ಸಲಾಹಿ(ಬಯಾನ್)ರನ್ನೂ ನಿಮಗೆ ವಹಿಸಿಕೊಡುತ್ತಿದ್ದೇನೆ. ಯುದ್ಧವು ನಮ್ಮನ್ನು ತಿಂಗಳುಗಟ್ಟಲೆ ದೂರಮಾಡಿತು. ಆದರೂ ಅವರು ಸಹನೆಯಿಂದ ಎಲ್ಲವನ್ನೂ ಅಲ್ಲಾಹನಿಗೆ ಅರ್ಪಿಸಿ ಆಲಿವ್ ಮರದಂತೆ ಗಟ್ಟಿಯಾಗಿ ನಿಂತಿರುವರು. ನನ್ನ ಅನುಪ ಸ್ಥಿತಿಯಲ್ಲಿ ಅವಳು ಎಲ್ಲ ಶಕ್ತಿ ಉಪಯೋಗಿಸಿ ಎಲ್ಲ ಹೊಣೆಗಾರಿಕೆಯನ್ನು ನಿರ್ವಹಿಸಿದರು. ಆಕೆಗೆ ಬೆಂಬಲ ನೀಡಬೇಕೆಂದು ನಿಮ್ಮೊಡನೆ ನಾನು ವಿನಂತಿಸುವೆನು.
ನಾನು ಸಾಯುವುದಾದರೆ ನನ್ನ ಆದರ್ಶಗಳನ್ನು ಬಿಗಿಹಿಡಿದು ಸಾಯುವೆ. ದೇವನ ವಿಧಿಯಲ್ಲಿ ತೃಪ್ತನಾಗಿರುವೆ. ಪ್ರಭುವನ್ನು ಭೇಟಿಯಾಗುವೆ ಎಂಬ ದೃಢವಿಶ್ವಾಸದೊಂದಿಗೆ ಅಲ್ಲಾಹನ ಬಳಿಯಿರುವುದು ಅತ್ಯಂತ ವಿಶಿಷ್ಟ ಮತ್ತು ಶಾಶ್ವತವಾಗಿರುವುದು ಎಂದು ಸಾಕ್ಷ್ಯವಹಿಸುವೆನು.
ಕರುಣಾ ನಿಧಿಯಾದ ಪ್ರಭೂ, ನನ್ನ ಹುತಾತ್ಮತೆಯನ್ನು ನೀನು ಸ್ವೀಕರಿಸು. ನನ್ನ ಸಕಲ ಪಾಪಗಳನ್ನು ಕ್ಷಮಿಸು. ನನ್ನಿಂದ ಬಸಿದ ರಕ್ತ ನನ್ನ ಜನರ ಕುಟುಂಬದ ಸ್ವಾತಂತ್ರ್ಯಕ್ಕಾಗಿರುವ ಹೊಳೆಯುವ ಪತಾಕೆಯಾಗಿಸು.
ನನ್ನಿಂದ ಪ್ರಮಾದ ಆಗಿದ್ದರೆ ಕ್ಷಮೆ ನೀಡಿರಿ. ಒಮ್ಮೆಯೂ ಮಾತು ತಪ್ಪದ ದೃಢವಾಗಿ ಮಾತು ಪಾಲಿಸಿದವ ನಾದುದರಿಂದ ನನಗಾಗಿ ದಯವಿಟ್ಟು ಪ್ರಾರ್ಥಿಸಿರಿ. ಗಾಝವನ್ನು ಯಾವತ್ತೂ ಮರೆಯದಿರಿ.. ನಿಮ್ಮ ಪ್ರಾಮಾಣಿಕ ಪ್ರಾರ್ಥನೆಗಳಲ್ಲಿ ನನ್ನನ್ನೂ ನೆನೆಯಿರಿ.












