ಪವಿತ್ರ ಕುರ್‌ಆನ್ ಕೊರಿಯನ್ ಭಾಷೆಗೆ ಅನುವಾದ: ಡಾ.ಹಮೀದ್ ಚೊಯ್ ಸಾಧನೆ

0
868

ಸನ್ಮಾರ್ಗ ವಾರ್ತೆ

ಪವಿತ್ರ ಕುರ್‌ಆನ್ ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿದ್ದು ಇದೀಗ ಕೊರಿಯನ್ ಭಾಷೆಗೆ ಅನುವಾದಗೊಂಡು ಸುದ್ದಿ ಮಾಡುತ್ತಿದೆ.

ಸೌತ್ ಕೊರಿಯಾ ಮೂಲದ ಡಾ.ಹಮೀದ್ ಚೊಯ್ ಯಂಗ್ ಎಂಬವರು ಕುರ್‌ಆನನ್ನು ಕೊರಿಯನ್ ಭಾಷೆಗೆ ಅನುವಾದಿಸಿದ್ದಾರೆ. ಅಲ್ಲದೆ ಪ್ರವಾದಿ ವಚನಗಳ ಸಂಗ್ರಹ ಗ್ರಂಥವಾದ ಸಹೀಹ್ ಬುಖಾರಿಯನ್ನೂ ಅನುವಾದಿಸಿದ್ದಾರೆ.

1975ರಲ್ಲಿ ಮದೀನಾ ವಿಶ್ವವಿದ್ಯಾಲಯದಲ್ಲಿ ಇಮಾಮ್ ಇಬ್ನ ಬಾಝ್‌ರವರ ಅಧೀನದಲ್ಲಿ ಅರೇಬಿಕ್ ಮತ್ತು ಇಸ್ಲಾಮಿಕ್ ಅಧ್ಯಯನಗಳಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ.

ಪವಿತ್ರ ಕುರ್‌ಆನ್‌ನ ಅನುವಾದ ಪೂರ್ಣಗೊಳ್ಳಲು 7 ವರ್ಷಗಳು ತಗುಲಿದ್ದು, ಅನುವಾದಕರ ಕುರಿತಾದ ವಿವರಗಳು ಬಹಳ ವಿರಳವಾಗಿ ಲಭ್ಯವಾಗಿವೆ. ಕುರ್‌ಆನ್‌ನ ಭಾಷೆಯು ಅರಬಿಯಾಗಿದ್ದು ಅದರ ಅನುವಾದವು ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.