ಹರಿಯಾಣದಲ್ಲಿ ಜೆಜೆಪಿ ಕಿಂಗ್ ಮೇಕರ್!- ದುಷ್ಯಂತ್ ಚೌಟಾಲ

0
866

ಹೊಸದಿಲ್ಲಿ,ಅ.24: ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುನ್ನಡೆಯಲಿದ್ದು ಹರಿಯಾಣದಲ್ಲಿ ಜೆಜೆಪಿ ಕಿಂಗ್ ಮೇಕರ್ ಆಗಲಿದೆ ಎಂದು ಪಾರ್ಟಿ ಅಧ್ಯಕ್ಷ ದುಷ್ಯಂತ್ ಚೌತಾಲ ಹೇಳಿದ್ದಾರೆ. ಈಗ ಏನೂ ಹೇಳಬರುವುದಿಲ್ಲ. ಆದರೆ, ಹರಿಯಾಣದಲ್ಲಿ ಜೆಜೆಪಿ ಕಿಂಗ ಮೇಕರ್ ಆಗುವ ನಿರೀಕ್ಷೆ ಇದೆ. ಯಾರಿಗೆ ಬೆಂಬಲ ನೀಡಬೇಕೆನ್ನುವ ಬಗ್ಗೆ ತನಗೆ ಒಬ್ಬನಿಂದ ನಿರ್ಧರಿಸಲು ಆಗುವುದಿಲ್ಲ. ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ವಿಧಾನಸಭಾ ಪಕ್ಷ ನಾಯಕರು ಈ ವಿಷಯದಲ್ಲಿ ತೀರ್ಮಾನಿಸಲಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ನಲ್ವತ್ತು ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 28 ಸ್ಥಾನಗಳಲ್ಲಿ ಜೆಜೆಪಿ ಹನ್ನೊಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.