ಅರವಿಂದ್ ಕೇಜ್ರಿವಾಲ್‍ಗೆ ಇಡಿಯ ಐದನೇ ಸಮನ್ಸ್

0
107

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮದ್ಯನೀತಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಯೋಜಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಇಡಿ ಐದನೇ ಸಮನ್ಸ್ ಕಳುಹಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

2023 ಜನವರಿ 18, ಜನವರಿ 3, ನವೆಂಬರ್ 2, ಡಿಸೆಂಬರ್ 21 ತಾರೀಕುಗಳಲ್ಲಿ ಇಡಿ ಹೊರಡಿಸಿದ ನಾಲ್ಕು ಸಮನ್ಸ್ ಗಳಿಗೆ ಕೇಜ್ರಿವಾಲ್ ಹಾಜರಾಗಿಲ್ಲ. ಫೆಬ್ರವರಿ ಎರಡಕ್ಕೆ ಹಾಜರಾಗುವಂತೆ ಹೊಸ ಸಮನ್ಸ್ ಕಳುಹಿಸಲಾಗಿದೆ.

ಕಾನೂನು ಪ್ರಕಾರ ಮಾಡುವುದನ್ನು ಮಾಡುತ್ತೇನೆ ಎಂದು ಕಳೆದ ಸಮನ್ಸ್ ಕುರಿತ ಪ್ರಶ್ನೆಗೆ ಕೇಜ್ರಿವಾಲ್ ಉತ್ತರಿಸಿದರು. ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಬಾರದೆಂದು ಕೇಜ್ರಿವಾಲ್‍ರನ್ನು ಬಂಧಿಸಲು ಇಡಿ ಯೋಜನೆ ಹಾಕಿಕೊಂಡಿದೆ ಎಂದು ಆಮ್ ಆದ್ಮಿ ಪಾರ್ಟಿ ತಿಳಿಸಿದೆ.

ದಿಲ್ಲಿಯ ಮದ್ಯ ನೀತಿಗೆ ಸಂಬಂಧಿಸಿ ಕಪ್ಪು ಹಣ ಬಿಳಿ ಮಾಡಿದ ಆರೋಪದಲ್ಲಿ ಇಡಿ ತನಿಖೆ ನಡೆಸುತ್ತಿದೆ. ವಿವಾದವಾದ ನಂತರ 2023 ಜುಲೈಯಲ್ಲಿ ಸರಕಾರದ ಮದ್ಯ ನೀತಿಯನ್ನು ಹಿಂದೆ ಪಡೆದುಕೊಂಡಿತ್ತು. ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಎಪ್ರಿಲ್‍ನಲ್ಲಿ ಕೇಜ್ರಿವಾಲ್ ವಿಚಾರಣೆ ನಡೆಸಿತ್ತು. ಹಿರಿಯ ಆಮ್ ಆದ್ಮಿಪಾರ್ಟಿ ಮತ್ತು ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯ ಮತ್ತು ಮಾಜಿ ಸಚಿವ ಸಂಜಯ್ ಸಿಂಗ್‍ರನ್ನು ಕೂಡ ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ.