2ನೇ ತರಗತಿಯವರೆಗೆ ಹೋಮ್‍‌ ವರ್ಕ್ ಬೇಡ, ಶಾಲಾ ಬ್ಯಾಗಿನ ಭಾರ ಕಡಿಮೆಗೊಳಿಸಬೇಕು- ಶಿಕ್ಷಣ ಸಚಿವಾಲಯ

0
553

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.9: ಎರಡನೆ ಕ್ಲಾಸಿನವರೆಗೆ ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ಬೇಡ, ಶಾಲೆಗಳಲ್ಲಿ ಡಿಜಿಟಲ್ ತೂಕದ ಯಂತ್ರ ಲಾಕರ್ ಇರಬೇಕು. ಚಕ್ರವಿರುವ ಶಾಲೆ ಬ್ಯಾಗ್‍ಗಳನ್ನು ತರಲು ಬಿಡಬಾರದು ಇತ್ಯಾದಿ ನಿರ್ದೇಶಗಳನ್ನು ಶಾಲೆ ಬ್ಯಾಗಿನ ಭಾರ ಕಡಿಮೆ ಮಾಡುವ ಹೊಸ ನೀತಿಯನ್ನು ಶಿಕ್ಷಣ ಸಚಿವಾಲಯ ಹೊರತಂದಿದೆ.

ಸ್ಕೂಲ್ ಬ್ಯಾಗಿನ ಭಾರ ಹೊಸ ವಿದ್ಯಾಭ್ಯಾಸ ನೀತಿಯಲ್ಲಿ ಒಳಪಡಿಸಿದ ನಿರ್ದೇಶದಂತೆ ಶಾಲೆ ವಿದ್ಯಾರ್ಥಿಗಳ ದೇಹ ಭಾರದ ಶೇ. ಹತ್ತರಷ್ಟು ಕಡಿಮೆ ಇರಬೇಕು. ಒಂದನೆ ತರಗತಿಯಿಂದ ಹತ್ತನೆ ತರಗತಿಯವರಿಗೆ ಈ ನಿಯಮ ಅನ್ವಯವಾಗಲಿದೆ. ಇದಕ್ಕೆ ಸಂಬಂಧಿಸಿದ ಅನ್ವೇಷಣೆಯಲ್ಲಿನ ಅಂತಾರಾಷ್ಟ್ರೀಯ ಮಟ್ಟದ ಮಾನದಂಡದ ಆಧಾರದಲ್ಲಿ ಈ ನಿರ್ದೇಶವನ್ನು ನೀಡಲಾಗಿದೆ.

ಎರಡನೆ ಕ್ಲಾಸಿನಲ್ಲಿ ಕಲಿಯುವ ಮಕ್ಕಳ ಭಾರ 22 ಕಿಲೋ ಆಗಿದ್ದರೆ ಬ್ಯಾಗಿನ ಭಾರ ಎರಡು ಕಿಲೋಕಿಂತ ಹೆಚ್ಚು ಇರಬಾರದು. ಪಿಯುಸಿಯಲ್ಲಿ ಮಕ್ಕಳ ತೂಕ 35ರಿಂದ 50 ಕಿಲೊ ಇರುವುದರಿಂದ ಶಾಲೆಯ ಬ್ಯಾಗಿನ ಭಾರ ಐದು ಕಿಲೊಕಿಂತ ಹೆಚ್ಚು ಇರಬಾರದು. ಶಾಲೆಯಲ್ಲಿ ಡಿಜಿಟಲ್ ತೂಕ ಇರಿಸಿಕೊಂಡು ಯಾವಾಗಲೂ ತೂಕವನ್ನು ಪರಿಶೀಲಿಸುತ್ತಿರಬೇಕು. ಕಡಿಮೆ ಭಾರದ ಮೆಟಿರೀಯಲ್ ನಿಂದ ಬ್ಯಾಗ್‍ಗಳಿದ್ದು ಸ್ಪಂಜು ಇರುವುದಾಗಿರಬೇಕು. ಮೆಟ್ಟಿಲು ಹತ್ತುವಾಗ ಮಕ್ಕಳಿಗೆ ಕಷ್ಟವಾಗುವ ಚಕ್ರದ ಬ್ಯಾಗ್‍ಗಳನ್ನು ತರಲು ಬಿಡಬಾರದು.

ಉತ್ತಮ ಗುಣಮಟ್ಟದ ಮಧ್ಯಾಹ್ನದೂಟ ಖಚಿತಪಡಿಸಬೇಕು. ಮಕ್ಕಳು ಬುತ್ತಿ ತರುವುದನ್ನು ಇದರಿಂದ ನಿಲ್ಲಿಸಬಹುದು. ಪಾಠ ಪುಸ್ತಕ ಪ್ರಕಾಶಕರು ಜಿಎಸ್‍ಎಂ ಸಹಿತ ಭಾರವನ್ನು ದಾಖಲಿಸಬೇಕೆಂದು ವಿದ್ಯಾಭ್ಯಾಸ ನೀತಿಯಲ್ಲಿದೆ. ಹೆಚ್ಚು ಸಮಯ ಕುಳಿತು ಕಲಿಯಲು ಆಗದ್ದರಿಂದ ಎರಡನೆ ತರಗತಿ ವರೆಗೆ ಹೋಮ್ ವರ್ಕ್ ನೀಡಬಾರದು. ಮೂರರಿಂದ ಐದರವರೆಗಿನ ವಿದ್ಯಾರ್ಥಿಗಳಿಗೆ ಗರಿಷ್ಠ ವಾರದಲ್ಲಿ ಎರಡು ಗಂಟೆಗಳ ಹೋಮ್ ವರ್ಕ್ ಮಾತ್ರ ಕೊಡಬೇಕು. ಆರರಿಂದ ಎಂಟು ವರ್ಷದ ಮಕ್ಕಳಿಗೆ ದಿನಕ್ಕೆ ಒಂದು ಗಂಟೆ ಹೋಮ್ ವರ್ಕ್ ಕೊಡಬೇಕು. ಒಂಬತ್ತರಿಂದ 12 ವರ್ಷದ ಮಕ್ಕಳಿಗೆ ಪ್ರತಿದಿನ 2 ಗಂಟೆಗಿಂತ ಹೆಚ್ಚು ಹೋಮ್ ವರ್ಕ್ ಕೊಡಬಾರದು.