ಶಿರಡಿ ಸಾಯಿ ಬಾಬ ಮಂದಿರ, ನಗರಕ್ಕೆ ಪ್ರವೇಶಿಸದಂತೆ ತೃಪ್ತಿ ದೇಸಾಯಿಗೆ ನಿಷೇಧ

0
375

ಸನ್ಮಾರ್ಗ ವಾರ್ತೆ

ಮುಂಬೈ,ಡಿ.9: ಹೋರಾಟಗಾರ್ತಿ ತೃಪ್ತಿ ದೇಸಾಯಿ ಮಹಾರಾಷ್ಟ್ರದ ಶಿರಡಿ ಪ್ರದೇಶಕ್ಕೆ ಪ್ರವೇಶಿಸದಂತೆ ನಿಷೇಧವನ್ನು ಡಿಸೆಂಬರ್ ಹನ್ನೊಂದರವರೆಗೆ ಹೇರಲಾಗಿದೆ. ಈ ಸಮಯದಲ್ಲಿ ಶಿರಡಿ ಮುನ್ಸಿಪಾಲಿಟಿ ವ್ಯಾಪ್ತಿಗೆ ಅವರು ಪ್ರವೇಶಿಸುವಂತಿಲ್ಲ ಎಂದು ಸಬ್‌ಡಿವಿಷನ್ ಮ್ಯಾಜಿಸ್ಟ್ರೇಟ್ ಗೋವಿಂದ ಶಿಂಧೆ ಆದೇಶದಲ್ಲಿ ತಿಳಿಸಿದ್ದಾರೆ.

ಭಕ್ತರು ಗೌರವಾನ್ವಿತ ವಸ್ತ್ರಗಳನ್ನು ಧರಿಸಬೇಕೆಂದು ಆಗ್ರಹಿಸಿದ ಬೋರ್ಡನ್ನು ಮಂದಿರದ ಆಡಳಿತ ಮಂಡಳಿ ಅಲ್ಲಲ್ಲಿ ಹಾಕಿತ್ತು. ಇದನ್ನು ತೃಪ್ತಿ ಪ್ರಶ್ನಿಸಿದ್ದಾರೆ. ಭಕ್ತರ ಮುಂದೆ ಪೂಜಾರಿಗಳು ಅರೆನಗ್ನವಾಗಿ ನಿಲ್ಲುವಾಗ ಭಕ್ತರಿಗೆ ಗೌರವಯುತ ಬಟ್ಟೆ ಧರಿಸಬೇಕೆಂದು ಹೇಳಲು ಯಾವ ಅಧಿಕಾರವಿದೆ ಎಂದು ಅವರು ಮಂದಿರ ಪದಾಧಿಕಾರಿಗಳು ಕೇಳಿದ್ದಾರೆ. ಈ ಬೋರ್ಡು ತೆಗೆದು ಹಾಕಬೇಕು. ಅಲ್ಲದಿದ್ದರೆ ತಾನು ಮತ್ತು ಸಂಗಡಿಗರು ಅಲ್ಲಿಗೆ ಬಂದು ತೆಗೆದು ಹಾಕುತ್ತೇವೆ ಎಂದು ಮಂದಿರ ಪದಾಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ.

ಭಕ್ತರಿಗೆ ಯಾವುದೇ ರೀತಿಯ ಡ್ರಸ್ ಕೋಡ್ ವಿಧಿಸಬೇಡಿ. ಭಕ್ತ, ಭಕ್ತೆಯನ್ನು ಅವರು ಧರಿಸುವ ಬಟ್ಟೆ ನೋಡಿ ಅಳೆಯಬೇಡಿ ಎಂದು ತೃಪ್ತಿ ಹೇಳಿದ್ದಾರೆ.