ಎಪ್‌ಸ್ಟೀನ್‌ ಮೊಸಾದ್ ಏಜೆಂಟ್ ಆಗಿದ್ದ: ದಂಗುಬಡಿಸುವ ಮಾಹಿತಿ

0
776

ಸನ್ಮಾರ್ಗ ವಾರ್ತೆ

ಲೈಂಗಿಕ ಪಾತಕಿ ಜೆಫ್ರಿ ಎಪ್‌ಸ್ಟೀನ್‌ ಮೊಸಾದ್ ನ ಏಜೆಂಟ್ ಆಗಿದ್ದ ಎಂಬ ದಂಗುಬಡಿಸುವ ಮಾಹಿತಿ ಬಿಡುಗಡೆಯಾಗಿದೆ. ಇಸ್ರೇಲ್ ಮಾಜಿ ಪ್ರಧಾನಿ ಯಹೂದ್ ಬರಾಕ್ ಅವರ ಅಡಿಯಲ್ಲಿ ಗುಪ್ತಚರ ತರಬೇತಿಯನ್ನು ಪಡೆದಿದ್ದ ಎಂದು ಕೂಡ ಎಪ್‌ಸ್ಟೀನ್‌ ಫೈಲಲ್ಲಿ ಬಹಿರಂಗವಾಗಿದೆ.

2007 ಮತ್ತು 2013ರ ನಡುವೆ ಯಹೂದ್ ಬರಾಕ್ ಅವರು ಇಸ್ರೇಲಿನ ರಕ್ಷಣಾ ಸಚಿವರಾಗಿದ್ದರು. ಈ ಸಮಯದಲ್ಲಿ ಎಪ್‌ಸ್ಟೀನ್‌ ಮತ್ತು ಬರಾಕ್ ನಡುವೆ ದೀರ್ಘ ಸಮಯದವರೆಗೆ ಸಂಬಂಧ ಇತ್ತು ಎಂಬುದನ್ನು ಫೈಲ್ ಬಹಿರಂಗಪಡಿಸಿದೆ.

ಅಮೆರಿಕಾದ ಜೊತೆ ಅದರ ಮಿತ್ರ ರಾಷ್ಟ್ರಗಳ ಜೊತೆ ಗುಪ್ತಚರ ಸೇವೆಗೆ ಸಂಬಂಧಿಸಿ ಕೆಲಸ ಮಾಡಿದ್ದಾರೆ ಎಂದು ಎಪ್‌ಸ್ಟೀನ್‌ ಫೈಲ್ ಮಾಹಿತಿ ಹೇಳುತ್ತದೆ.

ಬ್ಲಾಕ್ ಮೇಲ್ ಕೆಲಸಗಳಿಗೆ ಎಪ್‌ಸ್ಟೀನ್‌ನನ್ನು ಮೋಸಾದ್ ಬಳಸುತ್ತಿತ್ತು ಎಂಬುದು ಮಾಹಿತಿಯಿಂದ ತಿಳಿದು ಬಂದಿದೆ. ಸಾವಿರದ ಒಂಬೈನೂರ ಎಂಬತ್ತರಿಂದ ಎಪ್‌ಸ್ಟೀನ್‌ ಮತ್ತು ಅವರ ಗೆಳತಿ ಮ್ಯಾಕ್ಸ್ ವೆಲ್ ಇಬ್ಬರು ಇಸ್ರೇಲಿ ಇಂಟೆಲಿಜೆನ್ಸ್ ಗಾಗಿ ಕೆಲಸ ಮಾಡಿದ್ದರು ಎಂದು ಇಸ್ರೇಲಿನ ಮಾಜಿ ಆಫೀಸರ್ ಅರಿಬೆನ್ ಹೇಳಿರುವುದು ಈ ಮಾಹಿತಿಗೆ ಪುಷ್ಠಿ ನೀಡಿದೆ.