ರೈತ ಹೋರಾಟ ಬೆಂಬಲಿಸಿದವರಿಗೆ ಎನ್‍ಐಎ ನೋಟಿಸ್

0
432

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.16: ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರ ಬಾಯಿ ಮುಚ್ಚಿಸಲು ಕೇಂದ್ರ ಸರಕಾರ ಎನ್‍ಐಎಯನ್ನು ಛೂ ಬಿಟ್ಟಿದೆ ಎಂದು ವರದಿಯಾಗಿದೆ. ಎನ್‍ಐಎ ರೈತರನ್ನು ಬೆಂಬಲಿಸಿದವರಿಗೆ ನೋಟಿಸು ಕಳುಹಿಸಿದೆ ಎಂದು ರೈತರು ಹೇಳಿದರು. ಕೇಂದ್ರ ಸರಕಾರ ಮತ್ತು ರೈತರು ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಸಿದ ಒಂಬತ್ತನೆಯ ಹಂತದ ಚರ್ಚೆಯಲ್ಲಿ ರೈತರು ಈ ವಿಷಯವನ್ನು ಎತ್ತಿದ್ದಾರೆ.
ಹೋರಾಟದ ವೇಳೆ ಮೃತಪಟ್ಟಿರುವ ಕುಟುಂಬಕ್ಕೆ ರೈತ ಸಂಘಟನೆಗಳಿಗೆ ಫಂಡ್ ಕೊಟ್ಟವರಿಗೂ ಎನ್‍ಐಎ ನೋಟಿಸು ಕಳುಹಿಸಿದೆ ಎಂದು ರಾಷ್ಟ್ರೀಯ ಕಿಸಾನ್ ಮಹಾಸಂಘ್ ನಾಯಕ ಅಭಿಮನ್ಯು ಕೊಹರ್ ದ ಕ್ವಿಂಟ್ ಆನ್‍ಲೈನ್‍ಗೆ ಹೇಳಿದ್ದಾರೆ.

ಚರ್ಚೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು ಭಿನ್ನಮತವನ್ನು ಪರಿಹರಿಸಲು ಸರಕಾರ ಬಯಸುತ್ತಿದೆ ಎಂದು ಕೇಂದ್ರ ತಿಳಿಸಿದೆ ಎಂದು ಅವರು ಹೇಳಿದರು.

ಅಮೆರಿಕ ಕೇಂದ್ರವಾಗಿ ಕಾರ್ಯವೆಸಗುವ ಸಿಖ್ ಫಾರ್ ಜಸ್ಟಿಸ್‍ಗೆ ಸಂಬಂಧಿಸಿದ ಪಂಜಾಬ್ ನಿವಾಸಿಗಳಿಗೆ ಎನ್‍ಐಎ ಎಫ್‍ಐಆರ್ ದಾಖಲಿಸಿದೆ. ಇದರಲ್ಲಿ ಪ್ರವಾಸ ಬಸ್ ಆಪರೇಟರ್ಸ್, ಸಣ್ಣ ಉದ್ಯಮಿಗಳು, ಕೇಬಲ್ ಟಿವಿ ಆಪರೇಟರ್ ಸೇರಿದ್ದಾರೆ. ಜೊತೆಗೆ ಪತ್ರಕರ್ತರು ಮತ್ತು ಎನ್‍ಜಿಒಗಳಿಗೂ ನೋಟಿಸು ಕಳುಹಿಸಲಾಗಿದೆ. ಅಮೆರಿಕದ ಗುರ್ಪಂತ್‍ವಂತ್ ಸಿಂಗ್ ಪನ್ನು, ಅಮೆರಿಕದಲ್ಲಿ ಕಾರ್ಯವೆಸಗುವ ಪರಂಜಿತ್ ಸಿಂಗ್ ಪಮ್ಮ, ಕೆನಡದ ಹರ್ದೀಪ್ ಸಿಂಗ್ ನಿಜ್ಜಾರ್ ವಿರುದ್ಧ ಡಿಸೆಂಬರ್ 15ಕ್ಕೆ ದಿಲ್ಲಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಸಿಖ್ ಫಾರ್ ಜಸ್ಟಿಸ್ ಇದರ ಮುಖ್ಯಸ್ಥ ಪನ್ನು ಆಗಿದ್ದಾರೆ.

ದಣಸಿಖ್‍ ಫಾರ್ ಜಸ್ಟಿಸ್, ಇತರ ಖಾಲಿಸ್ಥಾನಿ ಭಯೋತ್ಪಾದಕ ಸಂಘಟನೆಗಳ ಸಹಿತ ರೈತ ಪ್ರತಿಭಟನೆಗೆ ನುಸುಳಿವೆ ಎಂದು ಕೇಂದ್ರ ಸರಕಾರಕ್ಕೆ ಮಾಹಿತಿ ಸಿಕ್ಕಿದೆ. ಇಂತಹ ಸಂಘಟನೆಗಳು ಭಯದ ವಾತಾವರಣ ಹುಟ್ಟುಹಾಕುತ್ತಿದೆ. ಜನರು ಅಸಂತೃಪ್ತರಾಗಿಸುತ್ತಿದೆ. ಭಾರತ ಸರಕಾರದ ವಿರುದ್ಧ ಗಲಭೆ ಪ್ರೋತ್ಸಾಹಿಸುತ್ತಿದೆ ಎಂದು ಎಫ್‍ಐಆರ್, ಜೊತೆಗೆ ವಿದೇಶದಿಂದ ಫಂಡ್ ಸಂಗ್ರಹಿಸುತ್ತಿದೆ ಎಂದು ಎಫ್‍ಐಆರ್‌ನಲ್ಲಿ ಹೇಳಲಾಗಿದೆ.

ಪ್ರತಿಭಟನೆಯಲ್ಲಿ ಖಾಲಿಸ್ತಾನಿಗಳು ನುಸುಳಿಕೊಂಡಿದ್ದರೆಂದು ಅಟಾರ್ನಿ ಜನರಲ್ ಮೂಲಕ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದ ಬೆನ್ನಿಗೆ ಹೊಸ ಬೆಳವಣಿಗೆಗಳು ನಡೆದಿದ್ದು, ಖಾಲಿಸ್ತಾನಿಗಳ ವಿರುದ್ಧ ನಿಂತ ರೈತರನ್ನು ಕೇಂದ್ರ ಸರಕಾರ ಅಪಮಾನಿಸುತ್ತಿದೆ ಎಂದು ರೈತ ಸಂಘಟನೆಗಳು ಹೇಳಿವೆ. ಕೇಂದ್ರ ಎನ್‍ಐಎ ಉಪಯೋಗಿಸಿ ರೈತರಿಗೆ ಕೀಟಲೆ ಕೊಡುತ್ತಿದೆ ಎಂದು ಶಿರೋಮಣಿ ಅಕಾಲಿದಳ ಹೇಳಿದೆ. ಇದೇ ವೇಳೇ. ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಹಣ ನೀಡಿದ ಸಂಘಟನೆಗಳು ಖಾಲಿಸ್ತಾನದ ವಿರುದ್ಧ ನಿಲುವು ಸ್ವೀಕರಿಸಿದವು ಎಂದು ರೈತ ಸಂಘಟನೆಗಳು ತಿಳಿಸಿವೆ.