ಕೋಲ್ಕತ್ತಾದ ಕೊಳಗೇರಿಯಲ್ಲಿ ಬೆಂಕಿ ಅವಘಡ: 60 ಗುಡಿಸಲುಗಳು ಬೆಂಕಿಗಾಹುತಿ

0
508

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ಇಂದು ಮಧ್ಯಾಹ್ನ 3.30ರ ಸುಮಾರಿಗೆ ಕೋಲ್ಕತ್ತಾದ ಟೋಪ್ಸಿಯಾದ ಕೊಳಗೇರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿಯನ್ನು ನಿಯಂತ್ರಿಸಲು ಕನಿಷ್ಠ ಆರು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು.

ಸುಮಾರು 50-60 ಗುಡಿಸಲುಗಳು ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಇದುವರೆಗೆ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ.