ಯಾಂಗೂನ್,ಮೇ 28: ಮ್ಯಾನ್ಮಾರ್‍ನಲ್ಲಿ 2017ರಲ್ಲಿ ರಾಖೈನ್ ಪ್ರದೇಶದಲ್ಲಿ ಸೈನಿಕ ಕಾರ್ಯಾಚರಣೆ ಮೂಲಕ ಹತ್ತು ಮಂದಿ ರೋಹಿಂಗ್ಯನ್ನರನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷಿಸಲಾಗಿದ್ದ ಏಳು ಮಂದಿ ಸೈನಿಕರನ್ನು ಬಿಡುಗಡೆಗೊಳಿಸಲಾಗಿದೆ. ಕಳೆದ ನವೆಂಬರ್‍ನಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸೈನಿಕರಲ್ಲೊಬ್ಬರು ಮಾಧ್ಯಮಗಳಿಗೆ ತಿಳಿಸಿದರು. ಅಂದರೆ ಕೇವಲ ಹತ್ತು ತಿಂಗಳು ಇವರಿಗೆ ಜೈಲು ಶಿಕ್ಷೆ ನೀಡಲಾಗಿತ್ತು. ಇವರ ಶಿಕ್ಷೆಯನ್ನು ಮ್ಯಾನ್ಮಾರ್ ಸೈನ್ಯ ಕಡಿತಗೊಳಿಸಿತ್ತು. ಈ ಬಗ್ಗೆ ಹೆಚ್ಚಿನ ವಿವರ ನೀಡಲು ಸೈನಿಕರು ಒಪ್ಪಿಲ್ಲ. ಇದೇ ವೇಳೆ ರೋಹಿಂಗ್ಯನ್ ಸಾಮೂಹಿಕ ಕೊಲೆಯ ಕುರಿತ ವರದಿಗಳನ್ನು ಬಹಿರಂಗಪಡಿಸಿದ ರಾಯಿಟರ್ಸ್ ಇಬ್ಬರು ವರದಿಗಾರರನ್ನು ಹದಿನಾರು ತಿಂಗಳು ಶಿಕ್ಷಿಸಲಾಗಿದೆ.
ರಾಯಿಟರ್ಸ್‍ನ ವಲೋನ್ ಮತ್ತು ಕ್ಯೊ ಸೋರನ್ನು 16 ತಿಂಗಳ ಜೈಲು ವಾಸದ ಬಳಿಕ ಮೇ ಆರರಂದು ಬಿಡುಗಡೆಗೊಳಿಸಲಾಗಿದೆ. ರೋಹಿಂಗ್ಯನ್ ಮುಸ್ಲಿಮರನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಕೇವಲ ಏಳು ಸೈನಿಕರನ್ನು ಮಾತ್ರ ಶಿಕ್ಷಿಸಲಾಗಿತ್ತು.












