ಅಮೆರಿಕ: ಭಾಗಶಃ ಮುಖ ಕಸಿಗೊಳಗಾದ ಮಹಿಳೆ ಸೋಂಕಿಗೆ ಬಲಿ

0
338

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಆ.2: ಅಮೆರಿಕದ ಮೊದಲ ಭಾಗಶಃ ಮುಖ ಬದಲಾವಣೆ ಶಸ್ತ್ರಕ್ರಿಯೆಗೆ ಒಳಗಾದ ಕೋನಿಕಲ್ಪ್ ಎಂಬ ಮಹಿಳೆ ಕೋವಿಡ್ ವೈರಸ್ ಬಾಧೆಯಿಂದ ಮೃತಪಟ್ಟಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.

2008ರಲ್ಲಿ ಅವರಿಗೆ ಶಸ್ತ್ರ ಕ್ರಿಯೆ ನಡೆದಿತ್ತು. ಮೂವತ್ತು ಬಾರಿ ಶಸ್ತ್ರಕ್ರಿಯೆಗೆ ಒಳಗಾಗಿದ್ದರು. ಸಾವಿನ ಕಾರಣಕ್ಕೂ ಶಸ್ತ್ರಕ್ರಿಯೆಗೂ ಸಂಬಂಧ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 2004ರಲ್ಲಿ ಪತಿ ಗುಂಡು ಹಾರಿಸಿದ್ದರಿಂದ ಕೊನಿಕಲ್ಪ್‌ರ ಗಲ್ಲ ಮುಖ ನಾಶವಾಗಿತ್ತು.

ಪತಿಗೆ ಏಳು ವರ್ಷ ಶಿಕ್ಷೆಯೂ ಲಭಿಸಿತ್ತು. ಮುಖ ಬದಲಾವಣೆ ಶಸ್ತ್ರಕ್ರಿಯೆಗೊಳಗಾದವರಲ್ಲಿ ಹೆಚ್ಚು ಕಾಲ ಬದುಕಿದ ವ್ಯಕ್ತಿ ಕೊನಿಕಲ್ಫ್ ಆಗಿದ್ದಾರೆ. ಇವರ ಶಸ್ತ್ರಕ್ರಿಯೆಗಿಂತ ಮೊದಲು ಫ್ರಾನ್ಸ್‌ನಲ್ಲಿ ಒಬ್ಬರಿಗೆ ಮತ್ತು ಚೀನಾದಲ್ಲಿ ಒಬ್ಬರಿಗೆ ಇಂತಹದೇ ಚಿಕಿತ್ಸೆ ನೀಡಲಾಗಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.