ಮದ್ಯದಂಗಡಿ ತೆರೆಯುವ ಮತ್ತು ವಲಸೆ ಕಾರ್ಮಿಕರನ್ನು ಲೂಟಿಗೆಯ್ಯುವ ಸರಕಾರದ ನೀತಿ ವಿರುದ್ಧ FITU ಖಂಡನೆ

0
435

ಸನ್ಮಾರ್ಗ ವಾರ್ತೆ

ಬೆಂಗಳೂರು, ಮೇ.3: ಪ್ರಸಕ್ತ ಲಾಕ್‌ಡೌನ್ ಅವಧಿ ಕೊನೆಗೊಳ್ಳುವ ಮುಂಚೆಯೇ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡುವ ರಾಜ್ಯ ಸರ್ಕಾರದ ಅನುಮತಿಯ ಆದೇಶವನ್ನು ಎಫ್‌ಐಟಿಯು ಖಂಡಿಸಿದೆ.

ಸರಕಾರದ ಈ ನಡೆಯನ್ನು ವಿರೋಧಿಸುವಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ರಹಿತವಾಗಿ ಸರ್ವ ಪಕ್ಷಗಳೂ ಒಂದಾಗಬೇಕಿದೆ. ಮಾತ್ರವಲ್ಲ ಅದಾವುದೇ ನಿಭಂದನೆ ಮೇರೆಯಿಂದಲಾಗಿದ್ದರೂ, ಜನರಿಗೆ ಮದ್ಯ ಸರಬರಾಜು ಮಾಡ ಕೂಡದು. ಮದ್ಯದಂಗಡಿಯನ್ನು ತೆರೆದು ಜನಗಳಲ್ಲಿ ನಶೆಯೇರಿಸಿದ ನಂತರ ಇತಿಮಿತಿಗಳ ಬಗ್ಗೆ ಹೇಳಲಾಗದು. ಇದು ರೋಗ, ತಡೆಗಟ್ಟುವಲ್ಲಿನ ಸರಕಾರದ ಇದುವರೆಗಿನ ಪ್ರಯತ್ನವನ್ನು ವಿಫಲಗೊಳಿಸಬಹುದೆಂಬುವುದನ್ನು ಆಳುವ ಪಕ್ಷವೂ ಕೂಡಾ ಅರ್ಥ ಮಾಡಿಕೊಳ್ಳಬೇಕು ಎಂದು ಅದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಅದೇ ರೀತಿಯಲ್ಲಿ ರಾಜ್ಯಾದ್ಯಂತ ಉಳಿದಿರುವ ದೇಶದ ವಿವಿಧೆಡೆಗಳಲ್ಲಿನ ವಲಸೆ ಕಾರ್ಮಿಕರನ್ನು ಉಚಿತವಾಗಿ ತಕ್ಷಣವೇ ಅವರವರ ಊರಿಗೆ ತಲುಪಿಸುವ ಹೊಣೆ ಸರ್ಕಾರದ ಜವಾಬ್ದಾರಿಯಾಗಿದ್ದು, ಅವರಿಂದ ಯಾವುದೇ ರೀತಿಯ ಶುಲ್ಕ ಪಡೆಯಕೂಡದು. ಅದರಲ್ಲೂ, ಬಡ,ವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಲು ಹೆಚ್ಚಿನ ವಸೂಲಿಯನ್ನು ಮಾಡಲಾಗುವುದು ಎಂಬ ಸರಕಾರದ ನಿರ್ಧಾರ ಶೋಷಣೆಯಾಗಿದ್ದು ಅದನ್ನು ಕೂಡಲೇ ಕೈ ಬಿಡಬೇಕು ಉಚಿತ ಸೇವೆಯ ಮೂಲಕ ಕಾರ್ಮಿಕರನ್ನು ಅವರ ಊರಿಗೆ ತಲುಪಿಸಬೇಕು. ಎಂಬುವುದಾಗಿ (FITU) ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಕಲ್ಲರ್ಪರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.

ಮಾರ್ಚ್ ತಿಂಗಳಲ್ಲಿ ಲಾಕ್‌ ಡೌನ್ ಆರಂಭವಾದಗಲೇ ಇವರನ್ನು ಊರಿಗೆ ಕಳಿಸುವ ವ್ಯವಸ್ಥೆ ಸರಕಾರ ಮಾಡಿರುತ್ತಿದ್ದರೆ ಇಂದು ಈ ಅವಸ್ಥೆ ಬರುತ್ತಿರಲಿಲ್ಲ.ಇದೀಗ ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೆ ಪರದಾಡುತ್ತಿದ್ದ ವಲಸೆ ಕಾರ್ಮಿಕರನ್ನು ಲೂಟಿ ಮಾಡಿ ಕಳಿಸುವಂತಹ ಸರಕಾರದ ನೀತಿ ಖಂಡನೀಯವಾಗಿದೆ. ಸರಕಾರವು ಯಾವುದೇ ಮುಂದಾಲೋಚನೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಓದುಗರೇ, Sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.