ಇಂಗ್ಲೆಂಡಿನ ರಾಜಕೀಯ ಪ್ರತಿನಿಧಿಗಳಿಂದ ಇಸ್ರೇಲ್‍ ಮೇಲೆ ದಿಗ್ಬಂಧನ ಹೇರಲು ಒತ್ತಾಯ

0
638

ಸನ್ಮಾರ್ಗ ವಾರ್ತೆ

ಲಂಡನ್,ಮೇ 3: ಇಸ್ರೇಲಿನ ವಿರುದ್ಧ ದಿಗ್ಬಂಧನ ಹೇರಲು ಬ್ರಿಟನ್ ಸರಕಾರಕ್ಕೆ ಬ್ರಿಟನ್‍ನ ಒಂದು ವಿಭಾಗದ ರಾಜಕಾರಿಣಿಗಳು ಒತ್ತಾಯಿಸಿದ್ದಾರೆ. ತೀವ್ರ ವಿರೋಧವಿದ್ದರೂ ಫೆಲಸ್ತೀನಿನ ವೆಸ್ಟ್ ಬ್ಯಾಂಕನ್ನು ವಶಪಡಿಸಿಕೊಳ್ಳಲು ಇಸ್ರೇಲ್ ಮುಂದಾಗಿದೆ. ಇದನ್ನು ತಡೆಯಬೇಕು ಮತ್ತು ಇಸ್ರೇಲಿಗೆ ದಿಗ್ಬಂಧನ ವಿಧಿಸಬೇಕೆಂದು ಬ್ರಿಟಿಷ್ ಪ್ರಧಾನಿ ಬೊರಿಸ್ ಜಾನ್ಸನ್‍ರಿಗೆ 127 ಮಂದಿ ಮನವಿ ಸಲ್ಲಿಸಿ ಒತ್ತಾಯಿಸಿದರು.

ಇವರಲ್ಲಿ ರಾಜಕಾರಣಿಗಳು, ನಾಡ ಪ್ರಮುಖರೂ ಇದ್ದಾರೆ. ಕನ್ಸರ್ವಟೇವಿ ಪಾರ್ಟಿ ಸದಸ್ಯರು ಕೂಡ ಇದರಲ್ಲಿ ಸೇರಿದ್ದಾರೆ.
ಅಂತಾರಾಷ್ಟ್ರೀಯ ಕಾನೂನು ಪ್ರಕಾರ ವೆಸ್ಟ್ ಬ್ಯಾಂಕನ್ನು ಇಸ್ರೇಲ್ ಸೇರಿಸಲು ಹವಣಿಸುವುದು ಕಾನೂನು ಬಾಹಿರವಾಗಿದ್ದು ಇದು ತೀವ್ರ ಪ್ರತ್ಯಾಘಾತವನ್ನು ಸೃಷ್ಟಿಸಲಿದೆ ಎಂದು ಪ್ರಧಾನಿಗೆ ನೀಡಿದ ಪತ್ರದಲ್ಲಿ ರಾಜಕಾರಣಿಗಳು, ನಾಡ ಪ್ರಮುಖರು ಒತ್ತಾಯಿಸಿದ್ದಾರೆ.

ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.