ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ ಲಂಡನ್ನಿಂದ ಆಗಮಿಸಿದ್ದ ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ಐವರಿಗೆ ಕೊರೋನಾ ಸೋಂಕು ಇರುವ ಬಗ್ಗೆ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನ ನಿಲ್ದಾಣದಲ್ಲಿ ತೀವ್ರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಲಂಡನ್ ನಿಂದ ಆಗಮಿಸಿದ 266 ಪ್ರಯಾಣಿಕರು ಮತ್ತು ಸಿಬ್ಬಂದಿ ವರ್ಗದ ಪೈಕಿ ಐವರಿಗೆ ಕೊರೋನಾ ಇರುವುದಾಗಿ ತಿಳಿದು ಬಂದಿದ್ದರಿಂದ ಅಧಿಕಾರಗಳು ಕೊರೋನಾದ ಎರಡನೇ ಅಲೆ( Second Wave) ಭಾರತಕ್ಕೆ ಕಾಲಿಟ್ಟಿರುವ ಸಂಶಯ ವ್ಯಕ್ತಪಡಿದ್ದಾರೆ ಎಂದು ತಿಳಿದು ಬಂದಿದೆ.
ಪಾಸಿಟಿವ್ ಇರುವವರ ರಕ್ತದ ಮಾದರಿಗಳನ್ನು ಸಂಶೋಧನೆಗಾಗಿ ಎನ್ಸಿಡಿಸಿಗೆ ಕಳುಹಿಸಲಾಗಿದೆ ಮತ್ತು ಅವರನ್ನು ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ನೋಡಲ್ ಅಧಿಕಾರಿ ಮಾಹಿತಿ ನೀಡಿದ್ದಾರೆ ಎಂದು ಎ.ಎನ್.ಐ. ತಿಳಿಸಿದೆ.
Five out of 266 passengers & crew members of a flight which arrived at Delhi airport from London last night have tested positive for COVID-19. Their samples have been sent to NCDC for research & they have been sent to care centre: Nodal officer for COVID-19
— ANI (@ANI) December 22, 2020












