ಪಶ್ಚಿಮ ಬಂಗಾಳದಲ್ಲಿ ಆಹಾರ ಸಚಿವರ ಮನೆಗೆ ಇಡಿ ದಾಳಿ

0
211

ಸನ್ಮಾರ್ಗ ವಾರ್ತೆ

ಕೊಲ್ಕತಾ, ಅ.5: ಪಶ್ಚಿಮ ಬಂಗಾಳದ ಆಹಾರ ಸಚಿವ ರತಿನ್ ಘೋಷ್‍ರ ಮನೆಗೆ ಇಡಿ ದಾಳಿ ಮಾಡಿ ತಪಾಸಣೆ ನಡೆಸುತ್ತಿದೆ. ಮುನ್ಸಿಪಲ್ ಕಾರ್ಪೊರೇಷ್ ನೇಮಕಾತಿ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟು ಅವರ ಮನೆಗೆ ಇಡಿ ದಾಳಿ ನಡೆಸಿದೆ.

ಕೊಲ್ಕತಾದಲ್ಲಿ ಹದಿಮೂರು ಕಡೆ ಇಡಿ ದಾಳಿ ಮಾಡಿದ್ದು ಸಚಿವರ ವಸತಿಯೂ ಇದರಲ್ಲಿ ಸೇರಿದೆ.

ಸರಕಾರಿ ಕೆಲಸಕ್ಕೆ ಅರ್ಹತೆ ಇಲ್ಲದವರನ್ನೂ ಆಯ್ಕೆ ಮಾಡಿದರು ಎಂಬುದು ಸಚಿವರ ವಿರುದ್ಧ ಕೇಸಾಗಿದೆ. ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳುವ ಮಧ್ಯಂಗ್ರ ಮುನ್ಸಿಪಾಲಿಟಿಯ  ಅಧ್ಯಕ್ಷರನ್ನೂ ಕೇಸಿಗೆ ಜೋಡಿಸಲಾಗಿದ್ದು ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಕೆಲಸ ಕೊಡಿಸಲು ಸಚಿವರು ಮತ್ತು ಅವರ ಸಂಗಡಿಗರು ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಸಚಿವರು ಎದರಿಸಿದ್ದು ಅದರಂತೆ ಇಡಿ ದಾಳಿಯಲ್ಲಿ ಈ ವಿಚಾರವನ್ನು ಪರಿಶೀಲಿಸುತ್ತಿದೆ.

ನಿನ್ನೆ ದಿಲ್ಲಿ ಮದ್ಯ ನೀತಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಪ್ಪು ಹಣ ಬಿಳಿ ಮಾಡಿದ ಆರೋಪದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್‍ರನ್ನು ಇಡಿ ಬಂಧಿಸಿತ್ತು. ಮದ್ಯ ನೀತಿಯಲ್ಲಿಯೇ ಕೇಜ್ರಿವಾಲ್ ಸರಕಾರದ ಇನ್ನೊಬ್ಬ ಪ್ರಮುಖ ಮನಿಷ್ ಸಿಸೊಡಿಯ ಈಗಾಗಲೇ ಜೈಲಲ್ಲಿದ್ದಾರೆ.