ಮೃತವೆಂದು ಘೋಷಿಸಿದ ಮಗುವಿಗೆ ಸಿಕ್ಕಿತು ಹೊಸ ಬದುಕು

0
270

ಸನ್ಮಾರ್ಗ ವಾರ್ತೆ

ದಿಸ್‍ಪುರ: ವೈದ್ಯರು ಮೃತಪಟ್ಟಿದೆ ಎಂದು ಘೋಷಿಸಿದ್ದ ನವಜಾತ ಶಿಶು ಜೀವಂತಗೊಂಡ  ಘಟನೆ ಅಸ್ಸಾಮಿನ ಸಿಲ್ಚಾರಿನಲ್ಲಿ ನಡೆದಿದೆ. ಮಗುವನ ಮೃತದೇಹ ಸಂಸ್ಕಾರಕ್ಕೆ ಸಿದ್ಧತೆಯಲ್ಲಿದ್ದಾಗ ಮಗುವಿನ ದೇಹದಲ್ಲಿ ಚಲನೆ ಕಂಡು ಬಂದಿದೆ.

ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು. ಪತ್ನಿಯು ಅಸೌಖ್ಯ ಇದ್ದುದರಿಂದ ತಾನು ಆಸ್ಪತ್ರೆಗೆ ದಾಖಲಿಸಿದ್ದೆ.  ಗಂಭೀರ ಪರಿಸ್ಥಿತಿ ಇದೆ ಆದ್ದರಿಂದ ಮಗು ಮತ್ತು ತಾಯಿ ಇಬ್ಬರಲ್ಲಿ ಒಬ್ಬರನ್ನು ರಕ್ಷಿಸಲು ಸಾಧ್ಯವಾಗಬಹುದು ಎಂದು ವೈದ್ಯರು ಹೇಳಿದ್ದರು ಎಂದು ನವಜಾತ ಶಿಶುವಿನ ತಂದೆ  ರತನ್ ದಾಸ್ ಹೇಳಿದರು.

ಬುಧವಾರ  ಪತ್ನಿ ಒಂದು ಮಗುವಿಗೆ ಜನ್ಮ ನೀಡಿದ್ದು ಮಗು ಮೃತಪಟ್ಟಿದೆ ಎಂದು ದೃಢೀಕರಣವಾಗಿತ್ತು. ನಂತರ ಮಗುವಿನ ಸಂಸ್ಕಾರ ಕಾರ್ಯಕ್ಕೆ ಸಿದ್ಧತೆ ನಡೆಸಿದೆವು. ಆಗ ಮಗು ಅಳುವುದು ಕೇಳಿಸಿತು. ಕೂಡಲೇ ಮಗುವನ್ನು ಆಸ್ಪತ್ರೆಗೆ ತಂದೆವು. ಈಗ ಮಗು ತೀವ್ರ ಶುಶ್ರೂಷೆ ವಿಭಾಗದಲ್ಲಿ ಚಿಕಿತ್ಸೆಯಲ್ಲಿದೆ.

ಘಟನೆಯಲ್ಲಿ ಸಿಲ್ಚಾರ್ ಮಾಲಿನಿ ಬಿಲ್ ಎಂಬಲ್ಲಿ ಒಂದು ಗುಂಪು ಆಸ್ಪತ್ರೆಯ ನಿರ್ಲಕ್ಷ್ಯ ಎಂದು ಪ್ರತಿಭಟನೆ ನಡೆಸಿದ್ದಾರೆ.

ಮಗು ಮೃತಪಟ್ಟಿದೆ ಎಂದು ಘೋಷಿಸುವ ಮೊದಲು ಎಂಟು ಗಂಟೆ ನಿಗಾದಲ್ಲಿತ್ತು ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಇದೇ ವೇಳೆ ಕರ್ತವ್ಯದಲ್ಲಿ ಲೋಪ ಎಸಗಿದ್ದಾರೆ ಎಂದು ಆಸ್ಪತ್ರೆ , ವೈದ್ಯರ ವಿರುದ್ಧ ಕುಟುಂಬದವರು ದೂರು ನೀಡಿದ್ದು ತನಿಖೆ ನಡೆಯುತ್ತಿದೆ.