ಎಸ್‌ಎ‌ಆರ್ ಗೀಲಾನಿ ನಿಧನ

0
765

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.25: ದಿಲ್ಲಿ ಯುನಿವರ್ಸಿಟಿಯ ಮಾಜಿ ಪ್ರೊಫೆಸರ್ ಮತ್ತು ಮಾನವಹಕ್ಕು ಕಾರ್ಯಕರ್ತ ಎಸ್‌ಎಆರ್ ಗೀಲಾನಿ ನಿಧನರಾಗಿದ್ದಾರೆ. ಗುರುವಾರ ಸಂಜೆ ದಿಲ್ಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಹೃದಯ ಆಘಾತದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದೇ ವೇಳೇ ಗೀಲಾನಿಯ ಮೃತದೇಹವವನ್ನು ಕುಟುಂಬಕ್ಕೆ ಬಿಟ್ಟು ಕೊಡಲು ಪೊಲೀಸರು ತಯಾರಾಗಿಲ್ಲ ಎನ್ನುವ ವರದಿಯೂ ಇದೆ. ಮರಣೋತ್ತರ ಸರ್ಟಿಫಿಕೆಟ್ ಸಿಕ್ಕಿದ ಬಳಿಕ ಮೃತದೇಹ ಕುಟುಂಬದ ವಶಕ್ಕೆ ನೀಡುವುದು ದಿಲ್ಲಿ ಪೊಲೀಸರ ನಿಲುವು ಆಗಿದೆ.

2001ರ ಪಾರ್ಲಿಮೆಂಟ್ ದಾಳಿಯಲ್ಲಿ ಗೀಲಾನಿಯ ಹೆಸರನ್ನು ಆರೋಪಿಗಳ ಸಾಲಿನಲ್ಲಿ ಸೇರಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿದರೂ ಸುಪ್ರೀಂಕೋರ್ಟು ಅವರನ್ನು ಖುಲಾಸೆಗೊಳಿಸಿತ್ತು. ನಂತರ, ಜೈಲಿನಿಂದ ಬಿಡುಗಡೆಗೊಂಡಿದ್ದರು. ಅವರು ನಂತರ ವಿಚಾರಣಾಧೀನ ಕೈದಿಗಳ ಬಿಡುಗಡೆಯ ವಿಷಯದಲ್ಲಿ ಮಾನವಹಕ್ಕು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಕಮಿಟಿ ಫಾರ್ ರಿಲೀಸ್ ಆಫ್ ಪಾಲಿಟಿಕಲ್ ಪ್ರಿಸಿನರ್ಸ್ ಸಂಘಟನೆಯ ಅಧ್ಯಕ್ಷರಾಗಿದ್ದರು. ಪತ್ನಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗೀಲಾನಿದಿಲ್ಲಿ ವಿಶ್ವವಿದ್ಯಾನಿಲಯದ ಅರಬಿಕ್ ಅಧ್ಯಾಪಕರಾಗಿದ್ದರು. ಪಾರ್ಲಿಮೆಂಟ್ ದಾಳಿ ಸಾಕ್ಷ್ಯ ಸಂಗ್ರಹಕ್ಕೆ ಎಂದು ಪೊಲೀಸಧಿಕಾರಿಗಳು ಕಸ್ಟಡಿಗೆ ಪಡೆದು ನಂತರ ಅರೋಪಿಯಾಗಿ ಸೇರಿಸಿದ್ದರು. ಅಫ್ಝಲ್ ಗುರು ಮುಂತಾದವರಿಗೆ ಗಲ್ಲುಶಿಕ್ಷೆ ನೀಡಲಾಗಿತ್ತು.