ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಿಧನ

0
477

ಸನ್ಮಾರ್ಗ ವಾರ್ತೆ

ಪುಣೆ,ಆ.5: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಿವಾಜಿ ರಾವ್ ಪಾಟೀಲ್ ನಿಲಂಗೇಕರ್ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.ಬುಧವಾರ ಬೆಳಗ್ಗೆ ತಮ್ಮ ವಸತಿ ಗೃಹದಲ್ಲಿ ನಿಧನರಾಗಿದ್ದಾರೆ

ಜುಲೈ 16ಕ್ಕೆ ಕೊರೋನ ದೃಢಪಟ್ಟಿತ್ತು. ಇವರನ್ನು ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನ ನೆಗೆಟಿವ್ ಆದ ನಂತರ ಎರಡು ದಿವಸಗಳ ಹಿಂದೆ ಅವರನ್ನು ಮನೆಗೆ ಕರೆತರಲಾಗಿತ್ತು.

ಕಾಂಗ್ರೆಸ್ ನಾಯಕರಾಗಿದ್ದ ಶಿವಾಜಿ ರಾವ್ ಪಾಟೀಲ್ 1985-86ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು. ಲಾತೂರ್‌ನವರಾದ ಇವರು 1968ರಲ್ಲಿ ಮಹಾರಾಷ್ಟ್ರ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.