ಒಂದೇ ದಿನದಲ್ಲಿ ದಾಖಲೆಯ 6,259 ಜನರಿಗೆ ಸೋಂಕು: ರಾಜ್ಯದಲ್ಲಿ ಒಟ್ಟು 1.45 ಲಕ್ಷ ಕೋವಿಡ್ ಪ್ರಕರಣಗಳು

0
773

ಸನ್ಮಾರ್ಗ ವಾರ್ತೆ

ಬೆಂಗಳೂರು,ಆ.5: ರಾಜ್ಯದಲ್ಲಿ 6,777 ಕೊರೋನ ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡಿದ್ದು ಇದೇ ವೇಳ, 6,259 ಜನರಿಗೆ ಒಂದೇ ದಿನದಲ್ಲಿ ಸೋಂಕು ತಗುಲುವುದರೊಂದಿಗೆ ಅತಿ ಹೆಚ್ಚು ದೈನಂದಿನ ಪ್ರಕರಣಗಳನ್ನು ರಾಜ್ಯವು ಕಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 1.45 ಲಕ್ಷ ಕೋವಿಡ್ ಪ್ರಕರಣಗಳಿದ್ದು, ಇವುಗಳಲ್ಲಿ 73,846 ಸಕ್ರಿಯ ಪ್ರಕರಣಗಳಿವೆ. ಒಟ್ಟು ಚೇತರಿಕೆಯ ಪ್ರಕರಣಗಳ ಸಂಖ್ಯೆಯು 69,272 ಕ್ಕೆ ಏರಿದೆ.

ಬೆಂಗಳೂರಿನಲ್ಲಿ 4,274, ಬಳ್ಳಾರಿ 483, ಧಾರವಾಡ 293 ಮತ್ತು ರಾಮನಗರ 259 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು (2,035) ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆಯು 63,033 ಕ್ಕೆ ತಲುಪಿದೆ. ಈ ಪೈಕಿ 34,021 ಸಕ್ರಿಯ ಕೋವಿಡ್ ಪ್ರಕರಣಗಳಿವೆ.

ಮೈಸೂರು(662)ಪ್ರಕರಣಗಳು, ಕಲಬುರ್ಗಿ(285), ಬಳ್ಳಾರಿ (284), ಬೆಳಗಾವಿ (263), ದಕ್ಷಿಣ ಕನ್ನಡ (225), ದಾವಣಗೆರೆ (191) ಪ್ರಕರಣಗಳು ದಾಖಲಾಗಿವೆ.

ಏತನ್ಮಧ್ಯೆ, 110 ರೋಗಿಗಳು ಅಸುನೀಗಿದ್ದು ರಾಜ್ಯದ ಒಟ್ಟು ಮೃತರ ಸಂಖ್ಯೆಯನ್ನು 2,704 ಕ್ಕೆ ಏರಿಕೆಯಾಗಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.