ಅಯೋಧ್ಯೆ ಭೂಮಿ ಪೂಜೆ; ಇದು ಕಾದ ಕ್ಷಣ- ಎಲ್.ಕೆ.ಅಡ್ವಾಣಿ

0
630

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.5: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅರಂಭವಾಗುವುದರಲ್ಲಿ ಸಂತೋಷವಿದೆ. ಹಿರಿಯ ಬಿಜೆಪಿ ನಾಯಕ ಮಾಜಿ ಉಪ ಪ್ರಧಾನಿ ಎಲ್‍.ಕೆ.ಅಡ್ವಾಣಿ ಮಂದಿರ ನಿರ್ಮಾಣಕ್ಕಾಗಿ ಕೆಲಸ ಮಾಡಲು ಆಗಿದ್ದಕ್ಕೆ ಸಂತೋಷಿಸಿದೆ ಎಂದು ವಿಶೇಷ ವೀಡಿಯೊ ಸಂದೇಶ ನೀಡಿದ್ದಾರೆ.

1990ರ ರಥಾಯಾತ್ರೆಯ ಮೂಲಕ ರಾಮ ಜನ್ಮಭೂಮಿ ಒಂದು ನಿರ್ಣಾಯಕ ಪಾತ್ರ ವಹಿಸಲು ಸಾಧ್ಯವಾಗಿರುವುದನ್ನು ನಾನು ನೆನೆಯುತ್ತೇನೆ. ಭಾರತದ ಸಂಸ್ಕೃತಿಯಲ್ಲಿ ಶ್ರೀರಾಮನಿಗೆ ಪ್ರಧಾನ ಸ್ಥಾನವಿದೆ. ರಾಮಮಂದಿರ ನಿರ್ಮಾಣ ಎಲ್ಲ ಭಾರತೀಯರಿಗೂ ಪ್ರೇರಣೆಯಾಗುವುದೆಂದು ದೇಶದ ಐಶ್ವರ್ಯ ತಂದು ಕೊಡುವುದೆಂದು ನಂಬುತ್ತೇನೆ. ಭಾರತದ ಬಲಿಷ್ಠ ಪ್ರತೀಕವಾಗಿ ರಾಮ ಮಂದಿರ ಮರು ನಿರ್ಮಾಣಗೊಳ್ಳುತ್ತಿದೆ ಎಂದು ಅಡ್ವಾಣಿ ಹೇಳಿದರು.

ರಥಾಯಾತ್ರೆಯ ಮೂಲಕ ಉತ್ತರ ಭಾರತದ ರಾಜಕೀಯವನ್ನು ಅಲುಗಾಡಿಸಿದ ಎಲ್.ಕೆ ಅಡ್ವಾಣಿಯವರು ರಾಮ ಜನ್ಮಭೂಮಿಯ ಮುಖವಾಗಿದ್ದರು. ಆದರೆ, ಅಡ್ವಾಣಿಯವರನ್ನು ಶಿಲಾನ್ಯಾಸಕ್ಕೆ ಕರೆಯದ್ದು ದೊಡ್ಡ ಸುದ್ದಿಯಾಗಿತ್ತು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.