ಸ್ಫೋಟ: ಇಸ್ರೇಲಿಗರಿಗೆ ಭಾರತ ಸುರಕ್ಷೆ ನೀಡುವ ತುಂಬು ವಿಶ್ವಾಸವಿದೆ; ನೆತನ್ಯಾಹು

0
420

ಸನ್ಮಾರ್ಗ ವಾರ್ತೆ

ಜೆರುಸಲೇಂ : ದಿಲ್ಲಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿ ಸಮೀಪ ನಡೆದ ಸ್ಫೋಟದ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್‍ನ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತ ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲಿದೆ. ಇಸ್ರೇಲಿಗರು ಮತ್ತು ಯಹೂದಿಯರಿಗೆ ಸುರಕ್ಷೆ ನೀಡಲಿದೆ ಎಂದು ಪೂರ್ಣ ವಿಶ್ವಾಸವನ್ನು ಪ್ರಕಟಿಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಇಸ್ರೇಲ್ ಅಧಿಕಾರಿಗಳ ಜೊತೆ ಮಾತಾಡಿದ ಬಳಿಕ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯೆ ನೀಡಿದರು. ಇದಕ್ಕಿಂತ ಮೊದಲು ವಿದೇಶಾಂಗ ಸಚಿವ ಎಸ್. ಜಯಶಂಕರ್ ಇಸ್ರೇಲ್ ವಿದೇಶ ಸಚಿವ ಗಾಬಿ ಅಷ್ಕಾನೊಸಿಯವರೊಂದಿಗೆ ಮಾತನಾಡಿದ್ದರು.
ದೂತವಾಸದಿಂದ 150 ಮೀಟರ್ ದೂರದಲ್ಲಿ ಶುಕ್ರವಾರ ಸಂಜೆ ಲಘು ಸ್ಫೋಟ ಸಂಭವಿಸಿತ್ತು. ಗಣರಾಜ್ಯೋತ್ಸವ ಸಮಾಪನಗೊಳ್ಳುವ ಬೀಟಿಂಗ್ ದ ಟ್ರೀಟ್ ವಿಜಯ್ ಚೌಕ್‍ಗಿಂತ ಒಂದೂವರೆ ಕಿಲೊಮೀಟರ್ ದೂರದಲ್ಲಿ ತೀವ್ರತೆಯಿಲ್ಲದ ಸ್ಫೋಟ ಕಾಲುದಾರಿಯ ಸಮೀಪ ನಡೆದಿದೆ. ಸ್ಫೋಟದಿಂದ ಮೂರು ಕಾರುಗಳ ವಿಂಡೊ ಸ್ಕ್ರೀನ್‍ಗಳಿಗೆ ಹಾನಿ ಆಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಈಗಲೂ ಅಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.