2015ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಗೀತಾರಿಗೆ ಸಂತಸ: ಕೊನೆಗೂ ತಾಯಿಯನ್ನು ಕಾಣುವ ಸೌಭಾಗ್ಯ ದೊರಕಿತು…

0
627

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ತನ್ನ ಹನ್ನೆರಡನೆ ವಯಸ್ಸಿನಲ್ಲಿ ರೈಲಿನಲ್ಲಿ ಪಾಕಿಸ್ತಾನಕ್ಕೆ ಹೋಗಿ ನಂತರ ಭಾರತಕ್ಕೆ ಮರಳಿದ ಗೀತಾರವರು ತನ್ನ ಕುಟುಂಬವನ್ನು ಪತ್ತೆಹಚ್ಚಿದ್ದಾರೆ.13 ವರ್ಷದವರೆಗೆ ಪಾಕಿಸ್ತಾನದಲ್ಲಿದ್ದ ಗೀತಾರನ್ನು 2015ರಲ್ಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮುಂದೆ ನಿಂತು ಭಾರತಕ್ಕೆ ಕರೆತರುವಲ್ಲಿ ಸಹಕರಿಸಿದ್ದರು. ಮೂಗಿ ಮತ್ತು ಕಿವುಡಿಯಾಗಿರುವ ಗೀತಾರ ಕುಟುಂಬವನ್ನು ಕಂಡು ಹುಡುಕುವ ಯತ್ನ ಅಂದಿನಿಂದ ನಡೆಯುತ್ತಲೇ ಇತ್ತು.

ಐದು ವರ್ಷದ ನಂತರ ಗೀತಾ ಮಹಾರಾಷ್ಟ್ರದಲ್ಲಿರುವ ತನ್ನ ಕುಟುಂಬದ ಬಗ್ಗೆ ರಕ್ಷಿಸಿದ ಆಧಿ ಟ್ರಸ್ಟ್‌ಗೆ ತಿಳಿಸಿದ್ದರು. ಗೀತಾ ರೈಲಿನಲ್ಲಿ ಕರಾಚಿಗೆ ಬಂದಿದ್ದರು. ಗೀತಾ ನಂತರ ಆಧಿ ಫೌಂಡೇಶನ್‍ನ ಆಶ್ರಯಕ್ಕೆ ಬಂದಿದ್ದರು. ಅವರು ಫಾತಿಮಾ ಎಂದು ಹೆಸರಿಸಿದ್ದರು. ನಂತರ ಬಾಲಕಿ ಹಿಂದೂ ಎಂದು ಮನವರಿಕೆಯಾದ ಬಳಿಕ ಗೀತಾ ಎಂದು ಹೆಸರು ಬದಲಿಸಿದರು. ತಾಯಿಯನ್ನು ಕಂಡುಹುಡುಕಿದ ವಿವರವನ್ನು ಫೌಂಡೇಶನ್ ಸ್ಥಾಪಕರಲ್ಲೊಬ್ಬರಾದ ಬಿಲ್ಕಿಸ್ ಏದಿಗೆ ಗೀತಾಳೆ ತಿಳಿಸಿದ್ದಾರೆ. ಗೀತಾರ ಸರಿಯಾದ ಹೆಸರು ರಾಧ ವಾಗ್ಮೋರೆ ಎಂದಾಗಿದೆ. ಮಹಾರಾಷ್ಟ್ರದ ನಯಿಗಾಕೊನ್ ಗ್ರಾಮದ ನಿವಾಸಿಯಾಗಿದ್ದು ಅಲ್ಲಿ ತಾಯಿಯನ್ನು ಪತ್ತೆ ಮಾಡಿದ್ದೇವೆ ಎಂದು ಫೌಂಡೇಶನ್‍ಗೆ ತಿಳಿಸಿದರು.

ಡಿಎನ್‍ಎ ಪರೀಕ್ಷೆಯಲ್ಲಿ ಗೀತಾರ ತಾಯಿಯನ್ನು ಗುರುತಿಸಲಾಗಿದೆ. ಗೀತಾರ ತಂದೆ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಬಳಿಕ ತಾಯಿ ಮೀನಾ ಮರು ಮದುವೆ ಮಾಡಿಕೊಂಡಿದ್ದರು. ತಾಯಿಯನ್ನು ಕಂಡು ಹುಡುಕಿದ ತುಂಬು ಸಂತೋಷವನ್ನು ಗೀತಾ ಹೊಂದಿದ್ದಾರೆ ಎಂದು ಫೌಂಡೇಶನ್ ಅಧಿಕಾರಿಗಳು ಹೇಳಿದ್ದಾರೆ.