ಆರೆಸ್ಸೆಸಿಗರು ಅಂಟಾರ್ಟಿಕಾಕ್ಕೆ ಹೋಗಲಿ- ಕೇರಳ ಸಂಸದ

0
927

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಜ. 21: ದೇಶದ ಜನಸಂಖ್ಯೆಯ ಅರ್ಧದಷ್ಟು ಜನರನ್ನು ಹೊರಗೆ ಹಾಕಿ ಇಲ್ಲಿ ಆಳುತ್ತೇವೆ ಎಂದು ಭಾವಿಸುವುದಕ್ಕಿಂತ ಆರೆಸ್ಸೆಸ್ ನವರು ಅಂಟಾರ್ಟಿಕಕ್ಕೆ ಹೋಗಬೇಕೆಂದು ಕೇರಳದ ಕಾಂಗ್ರೆಸ್ ಸಂಸದ ಕೆ. ಮುರಳೀಧರನ್ ಹೇಳಿದರು. ಅವರು ಕೇರಳ ಪ್ರತಿಪಕ್ಷ ಉಪನಾಯಕ ಎಂ ಕೆ ಮುನೀರ್ ರ ಏಕದಿನ ಉಪವಾಸ ಸತ್ಯಾಗ್ರಹ ಸಮರದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು.

ಮುಸ್ಲಿಮರು ಅತಿಥಿಗಳು, ಆತಿಥೇಯನ ವಿಷಯವನ್ನು ಹೇಳಬೇಡಿ ಎಂದು ಆರೆಸ್ಸೆಸ್ ನಾಯಕರು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಐದು ವರ್ಷ ಆಳ್ವಿಕೆಯ ಅಧಿಕಾರ ಸಿಕ್ಕಿತೆಂದು ದೇಶವೇನು ಕುಟುಂಬದ ಆಸ್ತಿಯೇ? ದೇಶದ ಜನಸಂಖ್ಯೆಯ ಅರ್ಧದಷ್ಟು ಜನರನ್ನು ಹೊರದಬ್ಬಿ ಇಲ್ಲಿ ಆಳ್ವಿಕೆ ನಡೆಸುವುದಕ್ಕಿಂತ ನೀವು ಇಲ್ಲಿಂದ ಹೋಗುವುದು ಉತ್ತವಾಗಿದೆ. ಅಂಟಾರ್ಟಿಕ ಅಥವಾ ಬೇರೆಲ್ಲಿಗೋ ಇಷ್ಟವಿರುವ ದೇಶಕ್ಕೆ ಹೋಗಿ. ಗಾಂಧೀಜಿಯ ಈ ಮಣ್ಣಿನಲ್ಲಿ ಹಕ್ಕು ಸ್ಥಾಪಿಸಲು ಬಂದರೆ ಜನರು ಪ್ರತಿರೋಧಿಸಿ ಸೋಲಿಸುತ್ತಾರೆ ಎಂದು ಮುರಳೀಧರನ್ ಹೇಳಿದರು.

ಹಿಟ್ಲರ್, ಮುಸೊಲನಿಯ ಇತಿಹಾಸ ಮೋದಿ, ಅಮಿತ ಶಾ ಓದಿ ನೋಡುವುದು ಉತ್ತಮ. ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್- ಸರ್ ಸಿ ಪಿಯ ಇತಿಹಾಸ ಓದಲಿ. ಅರ್ಧಮೂಗಿನಲ್ಲಿ ಸರ್ ಸಿ ಪಿ ಊರ ಬಿಟ್ಟು ಓಡಿಹೋಗಿದ್ದು ಇತಿಹಾಸ. ರಾಜ್ಯಪಾಲ ರಬ್ಬರ್ ಸ್ಟಾಂಪ್ ಆಗಿದ್ದಾರೆ ಎಂದು ಮುರಳೀಧರನ್ ಹೇಳಿದರು.