‘ಚುನಾವಣಾ ಆಯೋಗ ಮೋದಿಯ ಆಟಿಕೆ ಗೊಂಬೆ’ ಎಂದ ಮಮತಾ ಬ್ಯಾನರ್ಜಿಗೆ ಪ್ರತಿಪಕ್ಷಗಳಿಂದ ವ್ಯಾಪಕ ಬೆಂಬಲ

0
578

ಹೊಸದಿಲ್ಲಿ,ಮೇ 16: ಚುನಾವಣಾ ಆಯೋಗ ಬಿಜೆಪಿ ಮತ್ತು ಮೋದಿಯ ಆಟಿಕೆ ಗೊಂಬೆಯಾಗಿದೆ ಎಂಬ ಮಮತಾ ಬ್ಯಾನರ್ಜಿಯವರ ಹೇಳಿಕೆಗೆ ಪ್ರತಿಪಕ್ಷಗಳು ಬೆಂಬಲಿಸಿವೆ. ಪಶ್ಚಿಮ ಬಂಗಾಳದ ಅಕ್ರಮ ಪರಿಸ್ಥಿತಿಯನ್ನು ಪರಿಗಣಿಸಿ ಚುನಾವಣಾ ಪ್ರಚಾರವನ್ನು ಒಂದು ದಿವಸ ಮೊದಲೇ ಸ್ಥಗಿತಗೊಳಿಸಲು ತೀರ್ಮಾನಿಸಿದ ಆಯೋಗದ ಕ್ರಮದ ವಿರುದ್ಧ ಪ್ರತಿಪಕ್ಷ ಪಾರ್ಟಿಗಳು ಒಗ್ಗೂಡಿ ಮಮತಾರ ಬೆನ್ನ ಹಿಂದೆ ನಿಂತಿವೆ.

ಚುನಾವಣಾ ಆಯೋಗ ಸಂವಿಧಾನವನ್ನು ವಂಚಿಸಿತೆಂದು ಕಾಂಗ್ರೆಸ್ ಆರೋಪಿಸಿದೆ. ಅದು ಮೋದಿ-ಶಾರ ಕೈಗೊಂಬೆಯಾಗಿದೆ. ಚುನಾವಣಾ ಆಯೋಗ ಮೋದಿಯ ರ‌್ಯಾಲಿಗಳಿಗೆ ಮಾತ್ರ ಅನುಮತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಮಾಡೆಲ್ ಕೋಡ್ ಆಫ್ ಕಾಂಡೆಕ್ಟ್, ಮೋದಿ ಕೋಡ್ ಆಫ್ ಮಿಸ್‍ಕಾಂಡೆಕ್ಟ್ ಆಗಿ ಬದಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪ್ರತಿಕ್ರಿಯಿಸಿದರು.

ಮಮತಾರಿಗೆ ಬಿಎಸ್‍ಪಿ ಅಧ್ಯಕ್ಷ ಬಲವಾದ ಬೆಂಬಲವನ್ನು ಸೂಚಿಸಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯನ್ನು ಅಪಾಯಕರವಾದ ರೀತಿಯಲ್ಲಿ ಚಿತ್ರಿಸುತ್ತಿದ್ದಾರೆ. ಯೋಜನಾ ಬದ್ಧವಾಗಿ ಗುರಿಯಿಡಲಾಗಿದೆ ಎಂದು ಮಾಯಾವತಿ ಟೀಕಿಸಿದ್ದಾರೆ. ಇಂದು ರಾತ್ರೆ ಹತ್ತು ಗಂಟೆಯಿಂದ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಚುನಾವಣಾ ಪ್ರಚಾರವನ್ನು ನಿಷೇಧಿಸಿದೆ. ಇಂದು ಪ್ರಧಾನಿಯ ಎರಡು ರ‌್ಯಾಲಿಗಳು ಪಶ್ಚಿಮ ಬಂಗಾಳದಲ್ಲಿದೆ. ಇಂದು ಬೆಳಗ್ಗಿನಿಂದ ರ‌್ಯಾಲಿ ನಿಷೇಧಿಸಿಲ್ಲ. ಚುನಾವಣಾ ಆಯೋಗ ಒತ್ತಡದಿಂದ ಕೆಲಸ ಮಾಡುತ್ತಿದೆ ಎಂದು ಮಾಯಾವತಿ ಹೇಳಿದರು.