ಸನ್ಮಾರ್ಗ ವಾರ್ತೆ
ಮಂಗಳೂರು: “ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನದ ಅಂಗವಾಗಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಕರ್ನಾಟಕದ ಮಂಗಳೂರು ಘಟಕವು ನವೆಂಬರ್ 25 ರಂದು ಮಂಗಳೂರಿನ ಕ್ಲಾಕ್ ಟವರ್ ಹತ್ತಿರ ಸಂಜೆ 4:00 ರಿಂದ 5:೦೦ರವರೆಗೆ ಆರ್ಟ್-ರೇಜ್ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಆರ್ಟ್-ರೇಜ್ ಅತ್ಯಾಚಾರ ಮತ್ತು ಕಿರುಕುಳದ ವಿರುದ್ಧ ಒಂದು ಸಣ್ಣ ನೇತೃತ್ವದ ಪ್ರತಿಭಟನೆಯಾಗಿದೆ.












