ತಿರುವನಂತಪುರ: ಬಿಜೆಪಿಯು ಮುಸ್ಲಿಮರ ನಿತ್ಯ ಶತ್ರುವಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಉತ್ತಮ ಅಂಶಗಳನ್ನು ಸ್ವಾಗತಿಸುವುದಾಗಿ ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಷನ್ (SKSSF) ನ ಉನ್ನತಾಧಿಕಾರ ಸಮಿತಿಯ ಸದಸ್ಯರಾದ ಉಮರ್ ಫೈಝಿ ಮುಕ್ಕಂ ಅವರು ಹೇಳಿದ್ದಾರೆ. ಕೇರಳಕ್ಕೆ ಹೊಸ ರಾಜ್ಯಪಾಲರಾಗಿ ಆರಿಫ್ ಮುಹಮ್ಮದ್ ಖಾನ್ ರನ್ನು ಕೇಂದ್ರ ಸರಕಾರ ನೇಮಿಸಿರುವುದನ್ನು ಸ್ವಾಗತಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿಯನ್ನು ನಿತ್ಯ ಶತ್ರುವಿನ ರೂಪದಲ್ಲಿ ಮುಸ್ಲಿಮರು ನೋಡುತ್ತಿಲ್ಲ. ಬಿಜೆಪಿಯ ಕೆಲವು ವಿಷಯಗಳು ಮತ್ತು ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ವಿರೋಧ ಇರಬಹುದು. ಆದ್ದರಿಂದ, ಎಲ್ಲರಿಗೂ ನೆಮ್ಮದಿ ನೀಡುವಂಥ ಆಡಳಿತವನ್ನು ನೀಡಲು ಬಿಜೆಪಿಗೆ ಸಾಧ್ಯವಾದರೆ ಯಾಕಾಗಿ ವಿರೋಧಿಸಬೇಕು? ಆರಿಫ್ ಮುಹಮ್ಮದ್ ಖಾನ್ ರಂಥ ಓರ್ವ ಮುಸ್ಲಿಂ ವ್ಯಕ್ತಿ ಉನ್ನತ ಸ್ಥಾನಕ್ಕೆ ನೇಮಕವಾಗುವುದೆಂದರೆ, ಅದು ಸಂತಸದ ವಿಷಯ. ಈ ಹಿನ್ನೆಲೆಯಲ್ಲಿ ಆರಿಫ್ ರನ್ನು ನಾವು ಬಹಳ ಪ್ರೀತಿಯಿಂದ ಸ್ವಾಗತಿಸುತ್ತೇವೆ. ಅವರಿಗೆ ಉತ್ತಮವಾದ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿ ಎಂದು ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ.
ಬಿಜೆಪಿ ಸರಕಾರವು ಓರ್ವ ಮುಸ್ಲಿಮನನ್ನು ರಾಜ್ಯಪಾಲರಾಗಿ ನೇಮಿಸಿರುವುದನ್ನು ಹಲವರು ಆಶ್ಚರ್ಯದ ಬೆಳವಣಿಗೆಯಾಗಿ ನೋಡುತ್ತಿದ್ದಾರೆ. ಆದರೆ, ಅದರ ಅಗತ್ಯವಿಲ್ಲ. ಒಳ್ಳೆಯ ಆಡಳಿತವನ್ನು ನೀಡಿದರೆ ಮುಸ್ಲಿಮರು ಬಿಜೆಪಿಯನ್ನು ಸ್ವಾಗತಿಸುವರು ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಅವರ ಹೇಳಿಕೆಯ ಪೂರ್ಣ ಪಾಠ ಈ ಕೆಳಗಿನ ವೀಡಿಯೋದಲ್ಲಿದೆ.
https://m.facebook.com/story.php?story_fbid=378696059470913&id=109528540420076












